

ಆನೇಕಲ್:
ಕ್ಷೇತ್ರದ ಶಾಸಕ ಬಿ.ಶಿವಣ್ಣ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದಆಕ್ರೋಶಗೊಂಡ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಆನೇಕಲ್ ಪಟ್ಟಣ ಮತ್ತು ಚಂದಾಪುರದಲ್ಲಿ ಟೈಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಚಂದಾಪುರದಲ್ಲಿ ಹೆದ್ದಾರಿ ತಡೆ
ಚಂದಾಪುರ ವೃತ್ತದಲ್ಲಿ ಮಂಗಳವಾರ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ಮಾಡಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟೈಯರ್ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸಿಎಂ ನೆನಪಿಸಿಕೊಳ್ಳಲಿ
ಚಂದಾಪುರ ಬೈರೇಶ್ ಮಾತನಾಡಿ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಈ ಭಾಗದಲ್ಲಿ ಸಂಸದರಾದಾಗ ಶಾಸಕ ಬಿ.ಶಿವಣ್ಣ ಅವರು ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದನ್ನು ಮುಖ್ಯಮಂತ್ರಿಯವರು ನೆನಪಿಸಿಕೊಳ್ಳಬೇಕು, ಆನೇಕಲ್ ತಾಲೂಕನ್ನು ನಿರಂತರವಾಗಿ ಕಡೆಗಣಿಸುವುದು ಕಾಂಗ್ರೆಸ್ ಪಕ್ಷಕ್ಕೆ ತರವಲ್ಲ, ಮುಂದಿನ ದಿನಗಳಲ್ಲಿ ಆನೇಕಲ್ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕು, ಶಿವಣ್ಣಸಚಿವರಾದರೆ ಮಾತ್ರ ಅದು ಸಾಧ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿಯವರು ಎಚ್ಚೆತ್ತುಕೊಳ್ಳಬೇಕು ಎಂದರು.
ಮನವೊಲಿಕೆ ವಿಫಲ
ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವ ಯತ್ನ ಮಾಡಿದರಾದರೂ ಲಕಾರಿಯಾಗಿಲ್ಲ. ಪೊಲೀಸರು ತಡೆಯಲು ಮುಂದಾದರೂ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆಯಲಿಲ್ಲ. ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಹೊತ್ತು ರಸ್ತೆ ತಡೆಮಾಡಿದ್ದರಿಂದಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗಿತ್ತು. ಪ್ರತಿಭಟನೆಯಲ್ಲಿ ಮುನಿತಿಮ್ಮಾರೆಡ್ಡಿ, ರಾಮಸ್ವಾಮಿ, ಕುಮಾರ್,ಮಂಜುಳಾ, ಶ್ರೀಧರ್, ಬೈರೇಶ್,ಅಭಿಷೇಕ್,ಮಧುಸೂದನ್, ಜಯರಾಂ ಸರ್ಜಾ,ಆನಂದ್ ರೆಡ್ಡಿ, ಶಿವಶಂಕರ್, ಗಣೇಶ್, ಮೂರ್ತಿ, ಹರೀಶ್, ಸತೀಶ್, ಚೇತನ್ ಮತ್ತಿತರರು ಇದ್ದರು.
ಬಿ.ಶಿವಣ್ಣ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಚಿವ ಸ್ಥಾನ ನೀಡಬೇಕು, ಸಿದ್ದರಾಮಯ್ಯನವರು ಇದಕ್ಕೆ ಧ್ವನಿಯಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆನೇಕಲ್ ತಾಲೂಕಿನಲ್ಲಿ ದಲಿತರ ಶಕ್ತಿ ಏನು? ಕಾಂಗ್ರೆಸ್ಗೆ ಎಷ್ಟರಮಟ್ಟಿಗೆ ನಷ್ಟ ಆಗಲಿದೆ ಎಂಬುದನ್ನುಊಹಿಸಲೂ ಅಸಾಧ್ಯ ಎಂದು ಎಚ್ಚರಿಸಿದರು.