ವಿದ್ಯುತ್​ ಖಾಸಗೀಕರಣಕ್ಕೆ ವಿರೋಧ

Opposition to electricity privatization
Opposition to electricity privatization
Published on
ಕೊರಟಗೆರೆ: ರಾಜ್ಯದಲ್ಲಿ ವಿದ್ಯುತ್​ ವಿತರಣಾ ಚಟುವಟಿಕೆಗಳನ್ನು ಖಾಸಗಿ ಕಂಪನಿಗಳಿಗೆ ವಹಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆ ವಿರೋಧಿಸಿ ಬೆಸ್ಕಾಂ ನೌಕರರು ಗುರುವಾರ ಕೊರಟಗೆರೆ ಬೆಸ್ಕಾಂ ಉಪವಿಭಾಗ ಕಚೇರಿ ಮುಂಭಾಗ ಪ್ರತಿಭಟಿಸಿದರು.

ಕೇಂದ್ರ ಸರ್ಕಾರವು ವಿದ್ಯುತ್​ ಉತ್ಪಾದನೆ, ಪ್ರಸರಣ ಹಾಗೂ ವಿತರಣಾ ಸಂಸ್ಥೆಗಳನ್ನು ಖಾಸಗೀಕರಣ ಗೊಳಿಸುವ ಉದ್ದೇಶದಿಂದ ಜಾರಿಗೆ ತರಲು ಮುಂದಾಗಿರುವ ವಿದ್ಯುತ್​ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೊರಟಗೆರೆ ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್​ ವಿ.ಪ್ರಸನ್ನಕುಮಾರ್​ ಮಾತನಾಡಿ, ಸಾರ್ವಜನಿಕ ಸ್ವಾಮ್ಯದಲ್ಲಿರುವ ವಿದ್ಯುತ್​ ವಿತರಣಾ ಸಂಸ್ಥೆಗಳು ಸುಸಜ್ಜಿತ ಮೂಲಸೌಕರ್ಯ ಹೊಂದಿದ್ದು, ನೌಕರರು ಸಮರ್ಪಕವಾಗಿ ವಿದ್ಯುತ್​ ಸೇವೆ ಒದಗಿಸುತ್ತಿದ್ದಾರೆ ಎಂದರು.
ಕೊರಟಗೆರೆ ಉಪವಿಭಾಗ ನೌಕರರ ಸಂಘದ ಕಾರ್ಯದರ್ಶಿ ಕೆ.ವಿ.ನಟರಾಜು ಮಾತನಾಡಿ, ವಿದ್ಯುತ್​ ಕ್ಷೇತ್ರವನ್ನು ಖಾಸಗೀಕರಣಗೊಳಿಸಿದರೆ ಗ್ರಾಮೀಣ ಸೇವಾ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ. ರೈತರಿಗೆ ನಿರಂತರ ವಿದ್ಯುತ್​ ಪೂರೈಕೆ ದೊರೆಯದೆ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗಲಿದೆ. ಆದ್ದರಿಂದ ಸರ್ಕಾರವು ಖಾಸಗೀಕರಣದ ಪ್ರಸ್ತಾವನೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಕೆ.ವಿ. ನಟರಾಜು, ಸುನೀಲ್​ ಕುಮಾರ್​, ಸಹಾಯಕ ಇಂಜಿನಿಯರ್​ ಯೋಗೀಶ್​, ಮಲ್ಲಯ್ಯ, ಜೆ.ಡಿ. ರಾಘವೇಂದ್ರ, ಕೆ.ವಿ. ಮಂಜುಳಾವಾಣಿ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net