ಒಂದು ಜಗತ್ತು ಒಂದು ಮಾನವಕುಲ ಅಂತಾರಾಷ್ಟ್ರೀಯ ಸಮ್ಮೇಳನ

ನ್ಯೂಯಾರ್ಕ್‌ನಲ್ಲಿ ನಡೆದ ಅಂತರಾಷ್ಟ್ರೀಯ ಸಮಾವೇಶದಲ್ಲಿ ಆದಿಚುಂಚನಗಿರಿ ಮಠಾಧೀಶ  ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತಿತರರು ಪಾಲ್ಗೊಂಡಿದ್ದರು.
ನ್ಯೂಯಾರ್ಕ್‌ನಲ್ಲಿ ನಡೆದ ಅಂತರಾಷ್ಟ್ರೀಯ ಸಮಾವೇಶದಲ್ಲಿ ಆದಿಚುಂಚನಗಿರಿ ಮಠಾಧೀಶ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತಿತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಒಂದು ಜಗತ್ತು ಒಂದು ಮಾನವಕುಲ ಅಂತಾರಾಷ್ಟ್ರೀಯ ಸಮ್ಮೇಳನ
  • ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಗತಿಕ ಧಾರ್ಮಿಕ ಮುಖಂಡರು ಭಾಗಿ
  • ಆದಿಚುಂಚನಗಿರಿ ಶ್ರೀಗಳು, ಮೋಹನ್ ಭಾಗವತ್ ಪಾಲ್ಗೊಂಡು ಭಾಷಣ

ಬೆಂಗಳೂರು: ಅಮೆರಿಕದನ್ಯೂಯಾರ್ಕ್‌ನಲಿ ಇತ್ತೀಚೆಗೆ‘ಒಂದು ಜಗತ್ತು ಒಂದು ಮಾನವಕುಲ’ಎಂಬ ಆಶಯದ ಕುರಿತು ಮಹತ್ವದಅಂತಾರಾಷ್ಟ್ರೀಯ ಸಮ್ಮೇಳನನಡೆಯಿತು.

ಸಮ್ಮೇಳನದಲ್ಲಿಸುಮಾರು 14 ವಿವಿಧಧರ್ಮಗಳನ್ನು ಪ್ರತಿನಿಧಿಸುವಧಾರ್ಮಿಕ ನಾಯಕರು ಭಾಗವಹಿಸಿ,ವಿಶ್ವಶಾಂತಿ,ಮಾನವೀಯತೆ,ಧಾರ್ಮಿಕಸೌಹಾರ್ದತೆ,ಪರಸ್ಪರ ಗೌರವಮತ್ತು ಸಹಬಾಳ್ವೆಯ ಕುರಿತು ತಮ್ಮಸಂದೇಶಗಳನ್ನು ಹಂಚಿಕೊಂಡರು.

ಈಸಂದರ್ಭದಲ್ಲಿ ರಾಷ್ಟ್ರೀಯಸ್ವಯಂಸೇವಕ ಸಂಘದ ಸರಸಂಘಚಾಲಕರಾದಮೋಹನ್ ಭಾಗವತ್ ಹಾಗೂ ಆದಿಚುಂಚನಗಿರಿಮಠದ ಜಗದ್ಗುರು ಶ್ರೀ ಡಾ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀಪರಮಾತ್ಮಾನಂದಜೀ ಅವರು ಸಮ್ಮೇಳನದಲ್ಲಿಭಾಗವಹಿಸಿದ್ದರು.

ಸಮ್ಮೇಳನದಲ್ಲಿಮಾತನಾಡಿದ ಸ್ವಾಮೀಜಿಯವರು,ಧರ್ಮ,ದೇಶ,ಭಾಷೆ,ಸಂಸ್ಕೃತಿ ಹಾಗೂವಿವಿಧ ನಂಬಿಕೆಗಳ ವೈವಿಧ್ಯತೆಯನ್ನುಗೌರವಿಸುವುದರ ಜೊತೆಗೆ,ಇಡೀ ಮಾನವಕುಲಒಂದೇ ಎಂಬ ಅರಿವು ಮತ್ತು ಭಾವನೆಯನ್ನುಬೆಳೆಸುವ ಅಗತ್ಯವನ್ನು ಒತ್ತಿಹೇಳಿದರು.

ವಿಭಿನ್ನಧರ್ಮಗಳ ನಾಯಕರು ಒಂದೇ ವೇದಿಕೆಯಲ್ಲಿಒಂದು ಜಗತ್ತು ಒಂದು ಮಾನವಕುಲಎಂಬ ಸಾರ್ವತ್ರಿಕ ಸಂದೇಶವನ್ನುಸಾರಿರುವುದು ವಿಶ್ವಸಾಮರಸ್ಯದದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.ಮಾನವ ಸಮಾಜವುವಿಭಜನೆಗಳನ್ನು ಮೀರಿ ಪ್ರೀತಿ,ಕರುಣೆ,ಪರಸ್ಪರ ಗೌರವಮತ್ತು ಸಹಕಾರದೊಂದಿಗೆ ಮುನ್ನಡೆಯಬೇಕು.ಧರ್ಮಗಳುಮಾನವೀಯತೆಯನ್ನು ಬೆಸೆಯುವಸೇತುವೆಗಳಾಗಬೇಕು ಎಂಬ ಆಶಯವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net