ಹೊಸಕೋಟೆ ಹಲವೆಡೆ ಏಕಮುಖ ಸಂಚಾರ / HOSAKOTE

ಹೊಸಕೋಟೆ ದೊಡ್ಡಗಟ್ಟಿಗನಬ್ಬೆ ರಸ್ತೆಯ ಮೋರ್​ ಕಾಲೇಜು ರಸ್ತೆಯಲ್ಲಿ ಕಣ್ಣೂರಳ್ಳಿ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಚಾಲನೆ ನೀಡಿ ವಾಹನ ಸವಾರರಿಗೆ ಮೈಕ್​ ಮೂಲಕ ಡಿವೈಎಸ್​ಪಿ ಮಲ್ಲೇಶ್​ ಜಾಗೃತಿ ಮೂಡಿಸಿದರು.
ಹೊಸಕೋಟೆ ದೊಡ್ಡಗಟ್ಟಿಗನಬ್ಬೆ ರಸ್ತೆಯ ಮೋರ್​ ಕಾಲೇಜು ರಸ್ತೆಯಲ್ಲಿ ಕಣ್ಣೂರಳ್ಳಿ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಚಾಲನೆ ನೀಡಿ ವಾಹನ ಸವಾರರಿಗೆ ಮೈಕ್​ ಮೂಲಕ ಡಿವೈಎಸ್​ಪಿ ಮಲ್ಲೇಶ್​ ಜಾಗೃತಿ ಮೂಡಿಸಿದರು.
Published on
ಹೊಸಕೋಟೆ : ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರಸಿಕ್ಕು ಹೆಚ್ಚಾಗುತ್ತಿದ್ದು, ಪ್ರಾಯೋಗಿಕವಾಗಿ ನಗರದ ಕೆಲ ರಸ್ತೆಗಳನ್ನು ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟು ಸಂಚಾರ ದಟ್ಟಣೆ ನಿಯಂತ್ರಿಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೊಸಕೋಟೆ ಉಪವಿಭಾಗದ ಡಿವೈಎಸ್​ಪಿ ಮಲ್ಲೇಶ್​ ತಿಳಿಸಿದರು.
ಕೆಇಬಿ ವೃತ್ತದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆ (ದೊಡ್ಡಗಟ್ಟಿಗನಬ್ಬೆ ರಸ್ತೆ) ವಾಹನ ದಟ್ಟಣೆಯಿಂದ ಕೂಡಿದೆ. ಇದಕ್ಕೆ ಕಾರಣ ಕಾಲೇಜು ರಸ್ತೆಯ ಗಂಗಮ್ಮಗುಡಿ ರಸ್ತೆ, ಕಣ್ಣೂರಳ್ಳಿ ರಸ್ತೆ ಹಾಗೂ ಪ್ರವಾಸಿ ಮಂದಿರ ರಸ್ತೆಯಿಂದ ಕಣ್ಣುರಳ್ಳಿ ರಸ್ತೆಗೆ ಸಂಪರ್ಕಿಸುವ ರಸ್ತೆಗಳಾಗಿವೆ, ಈ ರಸ್ತೆಗಳಲ್ಲಿ ದ್ವಿಮುಖ ಸಂಚಾರದಿಂದಲೇ ಕಾಲೇಜು ರಸ್ತೆಯಲ್ಲಿ ಹೆಚ್ಚು ದಟ್ಟಣೆ ಆಗುತ್ತಿದೆ. ಆದ್ದರಿಂದ ನಗರದಲ್ಲಿ ಸಂಚಾರಸಿಕ್ಕು ಹೆಚ್ಚಿರುವ ಕಡೆ ಏಕಮುಖ ಸಂಚಾರ ಜಾರಿಗೊಳಿಸಲಾಗಿದೆ ಎಂದು ಡಿವೈಎಸ್​ಪಿ ತಿಳಿಸಿದರು.
ಕೆಲವು ದಿನ ಪ್ರಾಯೋಗಿಕವಾಗಿ ಏಕಮುಖ ಸಂಚಾರ ಜಾರಿ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ. ರಸ್ತೆಯಲ್ಲಿ ತೊಡಕು ಕಂಡು ಬಂದಲ್ಲಿ ಅದನ್ನು ಬಗೆಹರಿಸಿ ಗೆಜೆಟ್​ ನೋಟಿಫಿಕೇಶನ್​ ಜಾರಿ ಮಾಡಲಾಗುವುದು ಎಂದರು. ಏಕಮುಖ ಸಂಚಾರದಿಂದಷ್ಟೇ ವಾಹನ ದಟ್ಟಣೆ ನಿವಾರಣೆ ಆಗುವುದಿಲ್ಲ. ಜತೆಗೆ ುಟ್​ಪಾತ್​ ಅಂಗಡಿಗಳನ್ನು ಸಂಪೂರ್ಣ ತೆರವುಗೊಳಿಸಲಾಗುವುದು. ನಗರದಲ್ಲಿ ಕೆಲವರು ಅಂಗಡಿ ಮುಂದೆ ಪುಟ್​ಪಾತ್​ ಅಂಗಡಿಗಳು ಹೆಚ್ಚುವರಿಯಾಗಿ ಇಟ್ಟುಕೊಂಡಿರುವುದು ಹಾಗೂ ಪುಟ್​ಪಾತ್​ ಪಕ್ಕದ ವಾಹನ ಪಾರ್ಕಿಂಗ್​ಗಳನ್ನು ಬಳಸಿಕೊಳ್ಳುತ್ತಿರುವುದು ಕಂಡು ಬಂದಿದ್ದು, ತೆರವು ಮಾಡಲಾಗುತ್ತಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಇದರ ಬಗ್ಗೆ ಸೂಚನೆ ಸಲಹೆಗಳನ್ನು ಮುಕ್ತವಾಗಿ ನೀಡಬಹುದು ಎಂದರು.
ಏಕಮುಖ ಸಂಚಾರ ರಸ್ತೆಗಳು : * ಕಾಲೇಜು ರಸ್ತೆಯಿಂದ ಗಂಗಮ್ಮನ ಗುಡಿ ರಸ್ತೆಯಲ್ಲಿ ಹಾದು ಓಂ ಸರ್ಕಲ್​ ಮೂಲಕ ಕಣ್ಣುರಹಳ್ಳಿ ರಸ್ತೆಗೆ ಸಂಪರ್ಕ.
* ಕಣ್ಣೂರಹಳ್ಳಿಯಿಂದ ಕಾಲೇಜು ರಸ್ತೆಗೆ ಸಂಪರ್ಕಿಸಲು ವಿವೇಕಾನಂದ ಶಾಲೆ ರಸ್ತೆ.
* ಪ್ರವಾಸಿ ಮಂದಿರದ ಕೋರ್ಟ್​ ಹಿಂಭಾಗದ ರಸ್ತೆ ಮೋರ್​ ವೃತ್ತಕ್ಕೆ ಸಂಪರ್ಕಿಸುವುದು ಏಕಮುಖ ಸಂಚಾರ.
* ಪ್ರವಾಸಿ ಮಂದಿರ ರಸ್ತೆಯಿಂದ ಕೆಇಬಿ ವೃತ್ತ.
* ಪೊಲೀಸ್​ ಠಾಣೆಯಿಂದ ಕೆಇಬಿ ವೃತ್ತ.
* ಕೆ.ಆರ್​.ರಸ್ತೆಯಿಂದ ತಮ್ಮೇಗೌಡ ಬಡಾವಣೆಯ ಮೊದಲ ಮುಖ್ಯ ರಸ್ತೆ (ಚಿಕ್ಕೇಗೌಡ ಕಲ್ಯಾಣ ಮಂಟಪ ರಸ್ತೆ) ಯಿಂದ ಸೂಲಿಬೆಲೆ ರಸ್ತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net