9ರಂದು ಬೈಲಹೊಂಗಲ ಬಂದ್​ಗೆ ಕರೆ

ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾಹಿತಿ
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾಹಿತಿ
Published on
ಬೆಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ರಾಕ್​ ಗಾರ್ಡನ್​ ಮತ್ತು ಐಕ್ಯ ಸ್ಥಳದ ಅಭಿವದ್ಧಿ ಕಾಮಗಾರಿಗಳಲ್ಲಿ ಭಾರಿ ಅವ್ಯವಸ್ಥೆ ನಡೆಸಿ, ತುರಾತುರಿಯಲ್ಲಿ ಉದ್ಘಾಟಿಸಲಾಗಿದೆ. ಇದನ್ನು ಖಂಡಿಸಿ ಮಾ.9ರಂದು ಬೆಲಹೊಂಗಲ ಸಂಪೂರ್ಣ ಬಂದ್​ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಕ್​ ಗಾರ್ಡನ್​ ಕಾಮಗಾರಿ ಸಮರ್ಪಕವಾಗಿಲ್ಲ. ಆರೋಗ್ಯ ಸಚಿವ ದಿನೇಶ ಗುಂಡೂರಾವ್​ ಅವರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಕ್​ ಗಾರ್ಡನ್​ ಉದ್ಘಾಟನೆ ಮಾಡಿಸಲಾಗಿದೆ. ಆದರೆ, ಸರ್ಕಾರಿ ಶಿಷ್ಟಾಚಾರ ಪಾಲಿಸದೇ, ಅವ್ಯವಸ್ಥೆಯಿಂದ ಕಾರ್ಯಕ್ರಮ ನಡೆಸಿ ವೀರ ಮಾತೆಗೆ ಅವಮಾನಿಸಲಾಗಿದೆ ಎಂದು ದೂರಿದರು.
ನಂದಗಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಯಣ್ಣ ಮ್ಯೂಸಿಯಂ ಉದ್ಘಾಟನೆ ನಡೆದಿದ್ದರೆ, ಬೆಲಹೊಂಗಲದ ಚನ್ನಮ್ಮ ರಾಕ್​ ಗಾರ್ಡನ್​ಗೆ ಯಾಕೆ ಅದೇ ಮಟ್ಟದ ಗೌರವ ನೀಡಲಾಗಿಲ್ಲ. ರಾಜ್ಯ ಬಜೆಟ್​ನಲ್ಲಿ ಚನ್ನಮ್ಮ ಸೆನಿಕ ಶಾಲೆ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ ಮೀಸಲಿಡಬೇಕು. ಶ್ರೀದಲ್ಲೇ ಸಮರ್ಪಕ ಉದ್ಘಾಟನಾ ಸಮಾರಂಭ ಏರ್ಪಡಿಸದಿದ್ದರೆ ನಿರಂತರ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ನಗರದ ಮಿನಿ ವಿಧಾನಸೌಧ ಎದುರಿನ ಬಸವ ಉದ್ಯಾನದಲ್ಲಿ ಬಸವಣ್ಣನವರ ಕಂಚಿನ ಅಶ್ವಾರೂಢ ಪ್ರತಿಮೆ ಪ್ರತಿಷ್ಠಾಪಿಸಬೇಕು. ಪಿಯುಸಿ ಪರೀೆ ಹಿನ್ನೆಲೆಯಲ್ಲಿ ಬಸ್​ ಸಂಚಾರ ಬಂದ್​ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ, ಅಂಗಡಿ, ಮುಂಗಟ್ಟು, ಸರ್ಕಾರಿ ಕಚೇರಿ ಹಾಗೂ ವಿವಿಧ ಸಂ ಸಂಸ್ಥೆಗಳು ಬಂದ್​ ಪಾಲಿಸಲಿವೆ. ಚನ್ನಮ್ಮಾಜಿ ಅಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ.ಪಾಟೀಲ ಮನವಿ ಮಾಡಿದ್ದಾರೆ.
ಸಮಾಜಸೇವಕ ರಫೀಕ್​ ಬಡೇರ, ಶ್ರೀಶೆಲ ಯಡಳ್ಳಿ, ಶಿವಾನಂದ ಕೋಲಕಾರ,
ಮಡಿವಾಳಪ್ಪ ಹೋಟಿ, ಬಾಳನಗೌಡ ಪಾಟೀಲ, ರಿತೇಶ ಪಾಟೀಲ, ವಿಶಾಲ ಬೋಗೂರ, ಮಡಿವಾಳಪ್ಪ ಚಿಕ್ಕೊಪ್ಪ, ಬಸವರಾಜ ನೇಸರಗಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net