ಡಿ.13ರಂದು ಲೋಕ ಅದಾಲತ್​

ಬೆಲಹೊಂಗಲದಲ್ಲಿ ರಾಷ್ಟ್ರೀಯ ಲೋಕ ಅದಾಲತ ಕುರಿತು ರವಿ ಚವ್ಹಾಣ ಮಾಹಿತಿ ನೀಡಿದರು. ರೋಹಿಣಿ ಬಸಾಪುರ, ಬಸವರಾಜ ನಾಯಕ ಇದ್ದರು.
ಬೆಲಹೊಂಗಲದಲ್ಲಿ ರಾಷ್ಟ್ರೀಯ ಲೋಕ ಅದಾಲತ ಕುರಿತು ರವಿ ಚವ್ಹಾಣ ಮಾಹಿತಿ ನೀಡಿದರು. ರೋಹಿಣಿ ಬಸಾಪುರ, ಬಸವರಾಜ ನಾಯಕ ಇದ್ದರು.
Published on
ಬೈಲಹೊಂಗಲ: ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಟಕದ ಆಶ್ರಯದಲ್ಲಿ ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್​ ಆಯೋಜಿಸಲಾಗಿದೆ. ವಿವಿಧ ಪ್ರಕರಣಗಳ ತ್ವರಿತ ವಿಲೇವಾರಿಗೆ ರಾಜಿ&ಸಂಧಾನ ಮೂಲಕ ಇತ್ಯರ್ಥಪಡಿಸಲಾಗುತ್ತಿದ್ದು, ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚವ್ಹಾಣ ಹೇಳಿದರು. ನಗರದ ನ್ಯಾಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕ ಅದಾಲತ್​ನ ಮುಖ್ಯ ಉದ್ದೇಶ ಜನರಿಗೆ ದೀರ್ಕಾಲ ಕಾಯಿಸದೆ ನ್ಯಾಯ ದೊರಕುವಂತೆ ಮಾಡುವುದು. ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿಯಿರುವ ವಿವಿಧ ಪ್ರಕರಣ ಕೈಗೆತ್ತಿಕೊಳ್ಳಲಾಗುವುದು. ಚೆಕ್​ ಅಮಾನ್ಯ, ಬ್ಯಾಂಕ್​ ವಸೂಲಾತಿ ಪ್ರಕರಣ, ಉದ್ಯೋಗದಲ್ಲಿ ಪುನರ್​ ಸ್ಥಾಪನೆಯ ವಿವಾದಗಳು, ರಿಯಲ್​ ಎಸ್ಟೇಟ್​ ವಿವಾದ, ಜಿಲ್ಲಾ ಗ್ರಾಹಕರ ವೇದಿಕೆ ಪ್ರಕರಣ, ಕಾಯಂ ಜನತಾ ನ್ಯಾಯಾಲಯ ಪ್ರಕರಣ, ರಾಜಿಯಾಗಬಹುದಾದ ಅಪರಾಧ ಪ್ರಕರಣ, ವೆವಾಹಿಕ, ಭೂಸ್ವಾಧಿನ ಪ್ರಕರಣ, ವೇತನ&ಭತ್ಯೆ ಸೇರಿ ಇತರ ವಿವಾದ ಬಗೆಹರಿಸಿಕೊಳ್ಳಬಹುದು ಎಂದರು.= ನ್ಯಾಯಾಧೀಶರಾದ ರೋಹಿಣಿ ಬಸಾಪುರ, ಬಸವರಾಜ ನಾಯಕ, ವಕೀಲರ ಸಂದ ಪ್ರಧಾನ ಕಾರ್ಯದರ್ಶಿ ವಿ.ಜಿ.ಕಟದಾಳ, ವಕೀಲರಾದ ವಿ.ಸಿ.ಸಂಗೊಳ್ಳಿ, ಜೆ.ಎನ್​.ಚಿಕ್ಕೊಪ್ಪ, ಎಸ್​.ಬಿ.ಪೂಜೇರ, ಎಸ್​.ಬಿ.ಬಡಿಗೇರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net