

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಕೋವಿಡ್ ಕಾಲದಲ್ಲಿದ್ದ ಸಂಕಷ್ಟ ಮತ್ತು ಜನರ ಸಮಸ್ಯೆಗಳನ್ನು ಕಂಡಿರುವ
ಬಿಎಂಟಿಸಿ ಬಸ್ ಚಾಲಕರೊಬ್ಬರು
ನಿತ್ಯ ತಮ್ಮ ಸ್ವಂತ ಖರ್ಚಿನಲ್ಲಿ ಅನ್ನ ದಾಸೋಹ ಮಾಡುತ್ತಿದ್ದಾರೆ. ಅವರ ಕಾರ್ಯವು ಬೆಂಗಳೂರಿನಲ್ಲಿ ಇನ್ನೂ ಮಾನವೀಯತೆ, ಮನುಷ್ಯತ್ವ ಬದುಕಿದೆ ಎನ್ನುವುದನ್ನು ತೋರ್ಪಡಿಸುವಂತೆ ಮಾಡಿದೆ.
ಅವರ ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಅನೇಕರು ಅವರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಅನ್ನ ಕೊಟ್ಟವರ ಮನೆ ತಣ್ಣಗಿರಲಿ ಎಂದು ಹಾರೈಸುತ್ತಿದ್ದಾರೆ, (ಏಜೆನ್ಸೀಸ್)