ಯಾದಗಿರಿಯಲ್ಲಿ ಶುಕ್ರವಾರ ಹಮ್ಮಿಕೊಂಡ ವೃತ್ತಿ ಶಿಣ ಪ್ರದರ್ಶನ&ಕೆರಿಯರ್ ಮೇಳದಲ್ಲಿ ವಸ್ತು ಪ್ರದರ್ಶನದ ಬಗ್ಗೆ ಐಟಿಐ ಕಾಲೇಜಿನ ಪ್ರಾಚಾರ್ಯ ಅನೀಲಕುಮಾರ ಜಿಂದೆ ಮಾಹಿತಿ ನೀಡಿದರು. ವೃಷಭೇಂದ್ರಯ್ಯ, ಅಶೋಕಕುಮಾರ ಕೆಂಭಾವಿ ಇತರರಿದ್ದರು.
ಯಾದಗಿರಿ: ಸರ್ಕಾರಿ ನೌಕರಿ ಸಿಗಬೇಕೆಂಬ ಒಂದೇ ಒಂದು ಆಶೆಯಿಂದ ಓದಬೇಡಿ, ಅದರ ಹೊರತೂ ಸ್ವಯಂ ಉದ್ಯೋಗ ಸ್ಥಾಪಿಸಿ ಇತರರಿಗೆ ಉದ್ಯೋಗ ಕೊಡುತ್ತೇನೆ ಎಂಬ ನಿಟ್ಟಿನಲ್ಲಿ ವಿವಿಧ ವೃತ್ತಿ ಕೋರ್ಸ್ಗಳನ್ನು ಕಲಿಯಬೇಕು ಎಂದು ಜಿಪಂ ಸಿಇಒ ಲವೀಶ್ ಒರ್ಡಿಯಾ ಹೇಳಿದರು.
ಸಮಗ್ರ ಶಿಣ, ಶಾಲಾ ಶಿಣ ಇಲಾಖೆ, ಡಯಟ್ ಪದವಿಪೂರ್ವ ಶಿಣ ಇಲಾಖೆಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡ ವೃತ್ತಿ ಶಿಣ ಪ್ರದರ್ಶನ ಮತ್ತು ಕೆರಿಯರ್ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಡಾಕ್ಟರ್, ಇಂಜಿನಿಯರಿಂಗ್ ಇಲ್ಲವೆ ಯಾವುದಾದರೊಂದು ಸರ್ಕಾರಿ ನೌಕರಿ ಪಡೆಯಬೇಕೆಂಬ ಉದ್ದೇಶದಿಂದ ಓದುವವರ ಸಂಖ್ಯೆ ಅಧಿಕವಾಗಿದೆ. ಇದನ್ನು ಹೊರತು ಪಡಿಸಿಯೂ ವಿವಿಧ ಕೌಶಲ ಅಭಿವೃದ್ಧಿ ವೃತ್ತಿಪರ ಕೋರ್ಸ್ಗಳನ್ನು ಮುಗಿಸಿ ಅದರಿಂದ ಸ್ವತ@ ಉದ್ಯೋಗ ಮಾಡಬಹುದು. ಸರ್ಕಾರ ಈ ನಿಟ್ಟಿನಲ್ಲಿ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಮಕ್ಕಳಿಗೆ ಈ ತರಹದ ಮೇಳ ಆಯೋಜಿಸಿ ತರಬೇತಿ ಮತ್ತು ಜಾಗೃತಿ ಮೂಡಿಸುತ್ತಿದೆ ಎಂದರು.
ಡಿಡಿಪಿಐ ಸಿ.ಎಸ್.ಮುಧೋಳ್ ಮಾತನಾಡಿ, ವಿದ್ಯಾರ್ಥಿಗಳ ಉಜ್ಜಲ ಭವಿಷ್ಯಕ್ಕಾಗಿ ವಿಶೇಷ ಅವಕಾಶ ಕಲ್ಪಿಸಲು ಪ್ರೌಢಶಾಲೆ ಹಾಗೂ ಪದವಿಪೂರ್ವ ಹಂತದ ಮಕ್ಕಳಿಗೆ ಮುಂದಿನ ಶಿಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗಾವಕಾಶಗಳ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ಈ ಮೇಳದಲ್ಲಿ ನೀಡಲಾಗುತ್ತದೆ. ಹೀಗಾಗಿ ಮಕ್ಕಳು ತಮ್ಮ ಮುಂದಿನ ಶಿಕ್ಷಣದ ಆಯ್ಕೆ ಮಾಡಿಕೊಂಡು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಪಾಲಕರು ಮಕ್ಕಳ ಅಭಿರುಚಿಗೆ ತಕ್ಕಂತೆ ವಿದ್ಯೆ ನೀಡಬೇಕು. ಅಂದಾಗ ಅವರು ಸುಲಭದಲ್ಲಿ ಗುರಿ ಮುಟ್ಟಲು ಸಾಧ್ಯ. ಅಲ್ಲದೆ ವೃತ್ತಿ ಶಿಣದ ಬಗ್ಗೆ ಮಾಹಿತಿ ಹೊಂದಬೇಕು. ಸ್ವತ@ ಉದ್ಯೋಗ ಸ್ಥಾಪಿಸಿ ನೀವೇ ಮಾಲಿಕರಾಬೇಕು. ಅಂತಹ ಅವಕಾಶ ಸರ್ಕಾರ ಕಲ್ಪಿಸಿದೆ ಎಂದರು.
ಜಿಲ್ಲಾ ಶಿಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ವೃಷಭೇಂದ್ರಯ್ಯ ಜಿ.ಎಂ.ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ವೃತ್ತಿ ಜೀವನ ವಿಭಾಗ ಸ್ಥಾಪಿಸಲಾಗುತ್ತಿದೆ. ಈ ತರಹದ ಮೇಳ ಪ್ರತಿ ತಾಲೂಕುಗಳಲ್ಲಿ ಆಯೋಜಿಸಲಾಗುತ್ತದೆ. ಇದು ನಿಮ್ಮ ಪಠ್ಯದ ಒಂದು ಭಾಗವಾಗಿ ಮುಂದೆ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಅನೀಲಕುಮಾರ ಜಿಂದೆ, ಎಸ್ಆರ್ಟಿಟಿ ಕಂಪನಿಯ ಮಹೇಶ ಅವರು ವೃತ್ತಿ ಶಿಣ ಮತ್ತು ಉದ್ಯೋಸ್ಥರಾಗುವ ಬಗ್ಗೆ ಮಾಹಿತಿ ನೀಡಿ, ಸ್ಪಷ್ಟ ಗುರಿ ಮತ್ತು ಗುರುಗಳ ಮಾರ್ಗದರ್ಶನದಲ್ಲಿ ಶಿಣ ಕಲಿತರೆ ದುಡಿದು ಬದುಕುವುದು ಗ್ಯಾರಂಟಿ ಎಂದರು. ಹತ್ತನೇ ತರಗತಿಯಲ್ಲಿದ್ದಾಗಲೆ ಮುಂದಿನ ಗುರಿ ಇಟ್ಟುಕೊಳ್ಳಿ ಮತ್ತು ಆ ದಾರಿಯಲ್ಲಿ ಕಠಿಣ ಶ್ರಮ ಹಾಕಿ ಎಂದರು. ಇದೇ ವೇಳೆ 15 ಸ್ಕೌಟ್ ಮತ್ತು ಗೈಡ್ನ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಮೇಳದಲ್ಲಿ 12 ವೃತ್ತಿ ಪರ ಕಾಲೇಜು ಮತ್ತು ಸಂಸ್ಥೆಗಳು ಭಾಗವಹಿಸಿ ಮಕ್ಕಳಿಗೆ ಪ್ರತಿಯೊಂದರ ಬಗ್ಗೆ ಮಾಹಿತಿ ನೀಡಿದರು.