ಅ.18ಕ್ಕೆ ವಾಲ್ಮೀಕಿ, ಮದಕರಿ ನಾಯಕ ಜಯಂತಿ / NELAMANGAL

ನೆಲಮಂಗಲದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಬಿ.ಎ.ದಿಲೀಪ್​ಕುಮಾರ್​, ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂತರಾಮು, ಜಂಟಿ ಕಾರ್ಯದರ್ಶಿ ಗಂಗರಾಜು, ಖಜಾಂಚಿ ವಸಂತ್​, ಸದಸ್ಯ ವಸಂತ್​, ರವಿಕುಮಾರ್​, ಪ್ರಕಾಶ್​, ಮಹಿಳಾ ಟಕ ಅಧ್ಯೆ ಕೆ.ಪ್ರೇಮಾ ಇದ್ದರು.
ನೆಲಮಂಗಲದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಬಿ.ಎ.ದಿಲೀಪ್​ಕುಮಾರ್​, ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂತರಾಮು, ಜಂಟಿ ಕಾರ್ಯದರ್ಶಿ ಗಂಗರಾಜು, ಖಜಾಂಚಿ ವಸಂತ್​, ಸದಸ್ಯ ವಸಂತ್​, ರವಿಕುಮಾರ್​, ಪ್ರಕಾಶ್​, ಮಹಿಳಾ ಟಕ ಅಧ್ಯೆ ಕೆ.ಪ್ರೇಮಾ ಇದ್ದರು.
Published on

ನೆಲಮಂಗಲ :

ಪ್ರತಿವರ್ಷದಂತೆ ಈ ವರ್ಷವೂ ಅ.18ರಂದು ಮಹರ್ಷಿ ವಾಲ್ಮೀಕಿ ಹಾಗೂ ಮದಕರಿ ನಾಯಕ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಮುದಾಯದ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ರಾಜ್ಯ ವಾಲ್ಮೀಕಿ ಸೇನೆ ಅಧ್ಯಕ್ಷ ಬಿ.ಎ.ದಿಲೀಪ್​ಕುಮಾರ್​ ತಿಳಿಸಿದರು.

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸ್ತ್ರೀ&ಪುರುಷ ಸರಿಸಮಾನತೆಯೊಂದಿಗೆ ಕಲ್ಯಾಣ ರಾಜ್ಯದ ಆಶಯ ಹೊಂದಿದ್ದ ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ವಿವಿಧ ಪಾತ್ರಗಳ ಮೂಲಕ ಬದುಕಿನ ಪ್ರತಿ ಹಂತದಲ್ಲೂ ಅನುಸರಿಸಬೇಕಾದ ನೀತಿ ಬೋಧಿಸಿದ್ದು, ಪ್ರತಿಯೊಬ್ಬರೂ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು. ಅಂದು ಬೆಳ್ಳಿರಥದೊಂದಿಗೆ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ಹಾಗೂ ಪ್ರತಿಭಾ ಪುರಸ್ಕಾರ, ಪೌರ ಕಾರ್ಮಿಕರಿಗೆ, ನಿವೃತ್ತ ಯೋಧರಿಗೆ, ಶಿಕ್ಷಕರಿಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮಕ್ಕೆ ಸಮುದಾಯದ ರಾಜ್ಯಮಟ್ಟದ ನಾಯಕರನ್ನು ಆಹ್ವಾನಿಸಲಾಗುವುದು ಎಂದು ದಿಲೀಪ್​ಕುಮಾರ್​ ಮಾಹಿತಿ ನೀಡಿದರು.

ವಾಲ್ಮೀಕಿ ನಾಯಕ ಟ್ರಸ್ಟ್​ ಅಧ್ಯಕ್ಷ ಆಶೋಕ್​ಕುಮಾರ್​.ಕೆ.ಹಸಿರುಹಳ್ಳಿ, ನಿವೃತ್ತ ಯೋಧ ಲ್ಮಪತಿ ಮುಖಂಡರ ನಾಗರಾಜು, ರಾವೇಂದ್ರ, ಶಾಮ್​, ಗಂಗರಾಜು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net