ದೇವಸ್ಥಾನ ನಿರ್ಮಾಣದ ವೇಳೆ ಕಲ್ಲು ಒಡೆಯುವುದು, ಗೋಡೆ ಕಟ್ಟುವುದು ಸೇರಿ ಹಲವು ಕೆಲಸಗಳಲ್ಲಿ ದಲಿತರ ಶ್ರಮ ಪಡೆಯಲಾಗುತ್ತದೆ. ಆದರೆ ಜಾತಿ ಹೆಸರಿನಲ್ಲಿ ದೂರವಿಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ರಾಜುಗೌಡ, ವಿಜಯನಗರದಲ್ಲಿ ಸ್ವಾತಂತ್ರ‍್ಯ ದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಲೊಪ್ಪದ ಸಚಿವ ಜಮೀರ್ ಅವರನ್ನು ಸಿಎಂ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಅನಾರೋಗ್ಯ ಅಥವಾ ಅನಿವಾರ್ಯ ಕಾರಣವಿದ್ದರೆ ಬೇರೆ. ಆದರೆ ಧ್ವಜಾರೋಹಣಕ್ಕೆ ಗೈರಾಗಲು ಯಾವುದೇ ಸಮಂಜಸ ಕಾರಣವಿಲ್ಲದಿದ್ದರೆ ಸಿಎಂ ಗಂಭೀರ ಪರಿಗಣಿಸಬೇಕು ಎಂದು ಸಲಹೆ ನೀಡಿದರು.