ಎರಡು ವರ್ಷಗಳಿಗೆ ತಲಾ ಮೂರು ಮಂದಿಯಂತೆ ಆರು ಜನರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ರಾಮಚಂದ್ರ, ಜಲಸಂಪನ್ಮೂಲ ನಿರ್ವಹಣಾ ತಜ್ಞ ಡಾ. ಕೆ. ಜೈಪ್ರಕಾಶ್, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್. ಮರಿಸ್ವಾಮಿ ಮತ್ತು ಬಾಲಭವನದ ಕಾರ್ಯದರ್ಶಿ ನಿಶ್ಚಲ್ ಬಿ.ಎಚ್. ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಒಟ್ಟಾರೆ 20 ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು. ಅಂತಿಮವಾಗಿ ರಾಜ್ಯಪಾಲರು 6 ಹೆಸರಿಗೆ ಅನುಮತಿ ನೀಡಿದ್ದಾರೆಂದು ಕುಲಪತಿ ಪ್ರೊ. ಮೋಹನ್‌ಕುಮಾರ್ ಬಿ.ಕೆ. ತಿಳಿಸಿದರು.