

ಶ್ರೀಶೈಲ : ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ನವೆಂಬರ್ ತಿಂಗಳ ಧಾರ್ಮಿಕ ಕಾರ್ಯಕ್ರಮಗಳ ವೇಳಾಪಟ್ಟಿಯು ಈ ಕೆಳಗಿನಂತೆ ನಿಗದಿಯಾಗಿದೆ.
ನ.1 ಹಾಗೂ 2 ರಂದು ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಶಿಧರ ಹಿರೇಮಠ ಪರಿವಾರದ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸುವರು. ಅಂದು ಸಂಜೆ ಮುಧೋಳ ತಾಲೂಕಿನ ಮಹಾಲಿಂಗಪುರದಲ್ಲಿ ನೂತನ ಬಡಾವಣೆ ಉದ್ಘಾಟನೆ ನೆರವೇರಿಸುವರು. ನ.4ಕ್ಕೆ ಕುಷ್ಟಗಿ ತಾಲೂಕಿನ ಚಳಗೇರಿ ಹಿರೇಮಠದ ನೂತನ ರಥೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ನ.5 ರಿಂದ 7ರವರೆಗೆ ಶ್ರೀಶೈಲದಲ್ಲಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಮತ್ತು ಸಮಾಲೋಚನಾ ಸಭೆ. ನ.9 ರಂದು ಚಿಕ್ಕೋಡಿ ತಾಲೂಕಿನ ಯಡೂರದಲ್ಲಿ ಅಮಾವಾಸ್ಯೆಯ ಪ್ರಯುಕ್ತ ಶ್ರೀವೀರಭದ್ರಸ್ವಾಮಿಗೆ ವಿಶೇಷ ಪೂಜೆ ಹಾಗೂ ಭಕ್ತರಿಗೆ ದರ್ಶನ ನೀಡಲಿದ್ದಾರೆ. ನ.11 ಕ್ಕೆ ಸಾಗರ ತಾಲೂಕಿನ ವೀರಾಪುರ ಹಿರೇಮಠದ ನೂತನ ಶಿಲಾಮಠದ ಲೋಕಾರ್ಪಣೆ ನೆರವೇರಿಸುವರು. ನ.12 ಹಾಗೂ 13ರಂದು ದಾವಣಗೆರೆಯಲ್ಲಿ ಶ್ರೀಶೈಲ ಪೀಠದ ಲಿಂಗೈಕ್ಯ ವಾಗೀಶ ಜಗದ್ಗುರುಗಳ ಮತ್ತು ಲಿಂಗೈಕ್ಯ ಉಮಾಪತಿ ಜಗದ್ಗುರುಗಳ ಪುಣ್ಯಸ್ಮರಣೋತ್ಸವದ ಸಾನ್ನಿಧ್ಯ ವಹಿಸುವರು. ನ.14 ರಂದು ಹುಬ್ಬಳ್ಳಿಯಲ್ಲಿ ಎಂ.ಆರ್.ಪಾಟೀಲರ ನೂತನ ಕಚೇರಿ ಉದ್ಘಾಟನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನ.15 ರಂದು ಹಾನಗಲ್ನಲ್ಲಿ ಸದಾಶಿವ ಉದಾಸಿಯವರ ಸಹಸ್ರ ಚಂದ್ರ ದರ್ಶನ ಕಾರ್ಯಕ್ರಮದ ಸಾನಿಧ್ಯ, ನ.18ಕ್ಕೆ ಬಬಲೇಶ್ವರ ತಾಲೂಕಿನ ಹೊಳೆ ಹಂಗರಗಿಯಲ್ಲಿ ಮಲ್ಲಿಕಾರ್ಜುನ ಲಿಂಗ ಪ್ರತಿಷ್ಠಾಪನೆ ಸಮಾರಂಭದ ಸಾನ್ನಿಧ್ಯ ವಹಿಸುವರು. ಅಂದು ಸಂಜೆ ಹುನಗುಂದ ತಾಲೂಕಿನ ಕಮತಗಿಯಲ್ಲಿ ಕಾಡಸಿದ್ಧೇಶ್ವರ ಸಹಕಾರಿ ಸಂಘದ ಉದ್ಘಾಟನೆ, ನ.19ರಂದು ಸಿರಗುಪ್ಪ ತಾಲೂಕಿನ ತೆಕ್ಕಲಕೋಟದಲ್ಲಿ ಕಂಬಾಳಿಮಠದ ಲಿಂ. ಶ್ರೀಗಳ ಸಮಾಧಿ ಮಂದಿರದ ಲೋಕಾರ್ಪಣೆ ನೆರವೇರಿಸುವರು. ನ.20 ಕ್ಕೆ ಆಂಧ್ರಪ್ರದೇಶದ ಆಲೂರದಲ್ಲಿ ಶಿವಲಿಂಗ ಪ್ರತಿಷ್ಠಾಪನೆ, ನ.21ಕ್ಕೆ ಆಂಧ್ರಪ್ರದೇಶದ ಅನಂತಪುರದಲ್ಲಿ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಸಹಸ್ರಘಟ ಕಾರ್ಯಕ್ರಮ, ನ.22 ಮತ್ತು 23 ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ನ.24 ಕ್ಕೆ ತೆಲಂಗಾಣದ ಹೈದರಾಬಾದ್ನಲ್ಲಿ ಭಕ್ತಿ ಟಿವಿಯವರು ಆಯೋಜಿಸಿರುವ ಕೋಟಿ ದೀಪೋತ್ಸವ ಸಮಾರಂಭದಲ್ಲಿ ಭಾಗವಹಿಸುವರು. ನ.25 ರಂದು ತೆಲಂಗಾಣದ ವೇಮಲವಾಡದಲ್ಲಿ ಪ್ರಸಾದ ನಿಲಯದ ಲೋಕಾರ್ಪಣೆ ನೆರವೇರಿಸುವರು. ನ.26ಕ್ಕೆ ದಾವಣಗೆರೆಯಲ್ಲಿ ಶಂಭುಲಿಂಗೇಶ್ವರ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸುವರು. ನ.28 ಕ್ಕೆ ರಬಕವಿ ಬನಹಟ್ಟಿ ತಾಲೂಕಿನ ಸೈದಾಪೂರದಲ್ಲಿ ಜಗದ್ಗುರುಗಳ ಜನ್ಮದಿನೋತ್ಸವ ಹಾಗು ಶಿವದೀಕ್ಷಾ ಕಾರ್ಯಕ್ರಮದ ಸಾನಿಧ್ಯ ವಹಿಸುವರು. ನ.30ಕ್ಕೆ ಮಹಾರಾಷ್ಟ್ರದ ಜತ್ ಪಟ್ಟಣದಲ್ಲಿ ಶಿವಕೃಪಾ ಟ್ರೇಡರ್ಸ್ ಉದ್ಘಾಟನೆ ನೆರವೇರಿಸುವರೆಂದು ಶ್ರೀಪೀಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.