ಈ ವೇಳೆ ಆಹಾರ ಪದಾರ್ಥಗಳ ಗುಣಮಟ್ಟ, ಸುರಕ್ಷತೆ, ಸಂಗ್ರಹಣೆ, ಲೇಬಲಿಂಗ್ ಹಾಗೂ ಆಹಾರ ನಿರ್ವಹಣಾ ಕ್ರಮಗಳ ಕುರಿತು ತಪಾಸಣೆ ನಡೆಸಲಾಯಿತು. ಪರಿಶೀಲನೆ ವೇಳೆ ಚಿಕನ್ (146 ಕೆ.ಜಿ.), ಬೆಳ್ಳುಳ್ಳಿ (40 ಕೆ.ಜಿ.), ಅಕ್ಕಿ (300 ಕೆ.ಜಿ), ಒಣ ಹಣ್ಣುಗಳು (20 ಕೆ.ಜಿ.) ಉಪ್ಪಿನಕಾಯಿ (10.ಕೆ.ಜಿ.) ಮಸಾಲೆ (15 ಕೆ.ಜಿ.), ಸೇರಿ ಅನೇಕ ಆಹಾರ ಪದಾರ್ಥಗಳ ಪ್ಯಾಕಿಂಗ್‌ಗಳ ಮೇಲೆ ಎ್ಎಸ್‌ಎಸ್‌ಎಐ ಪರವಾನಗಿ ಲೇಬಲ್ ಇಲ್ಲದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸುಮಾರು 40 ಮಾದರಿಗಳನ್ನು ಸಂಗ್ರಹಿಸಿ, ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಘಟಕಕ್ಕೆ ನೋಟಿಸ್ ಜಾರಿಗೊಳಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.