ಕರ್ನಾಟಕವಷ್ಟೇ ಅಲ್ಲ ದಕ್ಷಿಣ ಭಾರತಕ್ಕೆ ಮೋಸ: ಸಿಎಂ ಸಿದ್ದರಾಮಯ್ಯ

CM Siddaramaiah
CM Siddaramaiah
Published on
ಕಲಬುರಗಿ: ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿದ ಕೇಂದ್ರ ಸರ್ಕಾರದ 13ನೇ ಬಜೆಟ್​ನಲ್ಲಿ ಕರ್ನಾಟಕದಿಂದ ಹೆಚ್ಚಿನ ತೆರಿಗೆಯನ್ನು ಪಡೆದು, ಖಾಲಿ ಚೊಂಬು ನೀಡಿದ್ದು, ಇಡೀ ದಣ ಭಾರತಕ್ಕೆ ವಿಶೇಷ ಅನುದಾನ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ದೂರದೃಷ್ಟಿ ಇಲ್ಲದ, ಅಂಕಿಅಂಶಗಳ, ಹೇಳಿಕೆಗಳಿಂದ ಕೂಡಿದ ಬಜೆಟ್​ ಇದಾಗಿದ್ದು, ಕೃತಿಗಿಳಿಯುವ ಒಂದೇ ಒಂದು ಯೋಜನೆಗಳು ಇದರಲ್ಲಿ ಇಲ್ಲ. ಕಳೆದ ವರ್ಷಕ್ಕಿಂತ ಬಜೆಟ್​ ಗಾತ್ರ ಶೇ.5.56 ರಷ್ಟು ಹೆಚ್ಚಾಗಿದ್ದು, (53.47 ಲಕ್ಷ ಕೋಟಿ), ಕರ್ನಾಟಕದ ಪಾಲಿಗೆ ದಕ್ಕಿದ್ದು ಣ ಎಂದು ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಜೆಟ್​ ಗಾತ್ರ ಕಳೆದ ವರ್ಷಕ್ಕಿಂತ ಶೇ.5.56 ಹೆಚ್ಚಾಗಿದ್ದು, 3 ಲಕ್ಷ ಕೋಟಿ ರೂ. ಹೆಚ್ಚಿಸಲಾಗಿದೆ. ಆದರೆ ಕರ್ನಾಟಕಕ್ಕೆ ನೀಡಿದ್ದು ಕಡಿಮೆ. ಬೆಂಗಳೂರಿಂದ ಹೈದರಾಬಾದ್​, ಚೆನ್ನೆ$ನಿಂದ ಬೆಂಗಳೂರಿಗೆ ಹೈಸ್ಪೀಡ್​ ರೈಲು ನೀಡಿದ್ದು, ಕರ್ನಾಟಕಕ್ಕಿಂತ ತೆಲಂಗಾಣ, ಆಂದ್ರ, ತಮಿಳುನಾಡಿನವರಿಗೆ ಲಾಭವಿದೆ ಎಂದು ಟೀಕಿಸಿದರು.
ತೆರಿಗೆ ಹಂಚಿಕೆಯಲ್ಲಿ ದ್ರೋಹ: ಕರ್ನಾಟಕವು ಪ್ರತಿವರ್ಷ ಕೇಂದ್ರಕ್ಕೆ 4.5 ಲಕ್ಷ ಕೋಟಿಯಿಂದ 5.5 ಲಕ್ಷ ಕೋಟಿವರೆಗೆ ತೆರಿಗೆ ಪಾವತಿಸುತ್ತದೆ. ರಾಜ್ಯದ ತೆರಿಗೆ ಪಾಲಿನಲ್ಲಿ ಶೇ.4.131 ಕರ್ನಾಟಕಕ್ಕೆ ನೀಡಿದ್ದು, ಬಿಹಾರಕ್ಕೆ 9.948, ಉತ್ತರ ಪ್ರದೇಶಕ್ಕೆ ಶೇ.17.619, ಓರಿಸ್ಸಾಕ್ಕೆ 4.420, ರಾಜಸ್ಥಾನಕ್ಕೆ 5.926 ನೀಡಿದ್ದಾರೆ. ಅತಿ ಹೆಚ್ಚು ತೆರಿಗೆ ಪಾವತಿಸುವ, ಜಿಎಸ್​ಟಿಯಲ್ಲಿ ದ್ವೀತಿಯ ಸ್ಥಾನದಲ್ಲಿರುವ, ವಿದೇಶಿ ಬಂಡವಾಳ ಹೂಡಿಕೆಯಲ್ಲಿ ನಂಬರ್​ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಪಾಲು ನೀಡುವಲ್ಲಿ ಅನ್ಯಾಯ ಮಾಡಲಾಗಿದೆ ಎಂದರು.
ಕೇಂದ್ರ ಪುರಸತ ಯೋಜನೆಗಳಿಗೆ ರಾಜ್ಯ ಸರ್ಕಾರದ ಪಾಲು ಹೆಚ್ಚಿಸಿ, ಕೇಂದ್ರದ ಪಾಲು ಕಡಿತಗೊಳಿಸಲಾಗುತ್ತಿದೆ. ಹಿಂದೆ ಬಹುತೇಕ ಯೋಜನೆಗಳಲ್ಲಿ ಶೇ.75 ಕೇಂದ್ರದ ಪಾಲು, ಶೇ.25 ಇತ್ತು. ಇದೀಗ ನರೇಗಾದಲ್ಲಿ ಶೇ.60:40, ಜೆಜೆಎಂನಲ್ಲಿ ಶೇ.50:50 ಮಾಡಿದೆ. ಜೆಜೆಎಂ ಬಾಕಿ 13 ಸಾವಿರ ಕೋಟಿ ರೂ. ನೀಡಿಲ್ಲ. ಹೆಚ್ಚು ಕೊಡುಗೆ ನೀಡುವ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಪದೇ ಪದೆ ಅನ್ಯಾಯ ಮಾಡಲಾಗುತ್ತಿದೆ. ಬಜೆಟ್​ ಅಲ್ಲ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ದ್ರೋಹ ಎಂದರು.
ನಗರ ಮತ್ತು ಗ್ರಾಮೀಣ ಸ್ಥಳಿಯ ಸಂಸ್ಥೆಗಳಿಗೆ ಉತ್ತರ ಪ್ರದೇಶಕ್ಕೆ 83,261 ಕೋಟಿ ರೂ. ನೀಡಿದ್ದು, ಕರ್ನಾಟಕಕ್ಕೆ ಕೇವಲ 18,889 ಕೋಟಿ ನೀಡಲಾಗಿದೆ. ದೊಡ್ಡ ಅನ್ಯಾಯ ಮುಂದುವರಿಸಲಾಗಿದೆ ಎಂದರು.
ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್​, ಶಿವರಾಜ ತಂಗಡಗಿ, ಎನ್​.ಎಸ್​.ಭೋಸರಾಜು, ಶಾಸಕರಾದ ಎಂ.ವೈ ಪಾಟೀಲ್​, ಖನೀಜ್​ ಫಾತಿಮಾ, ಪರಿಷತ್​ ಸದಸ್ಯ ಜಗದೇವ ಗುತ್ತೇದಾರ, ಮೇಯರ್​ ವರ್ಷಾ ಜಾನೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net