ರೈತ ಮುಖಂಡ ನರಸಿಂಹ ಮಾತನಾಡಿ, ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಕೂಡದು. ಇದ್ದರಿಂದ ರೈತರಿಗೆ ಅನ್ಯಾಯವಾಗಲಿದೆ. ಹಾಗಾಗಿ ಸಭೆಯ ರೈತರು ಮಾಡಿದ ಒತ್ತಾಯವನ್ನು ಸರ್ಕಾರ ಗಮನ ಸೆಳೆಯಬೇಕು. ಈ ಬೇಸಿಗೆಯಲ್ಲಿ ರೈತರ ಬೇಡಿಕೆಯಂತೆ ವಿದ್ಯುತ್ ನೀಡಲಾಗಿದೆ. ವಿದ್ಯುತ್ ಇಲಾಖೆ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ, ಕೊಳ್ಳೇಗಾಲ ಪಟ್ಟಣ ದಿನ ದಿನದಿಂದ ಬೆಳೆಯುತ್ತಿದೆ ಗ್ರಾಹಕರು ಹೆಚ್ಚಾಗುತ್ತಿದ್ದಾರೆ. ಇರುವ ಒಂದು 24*7 ವಿದ್ಯುತ್ ಸೇವಾ ವಾಹನ ಸೇವೆ ಸಾಲುತ್ತಿಲ್ಲ. ಹಾಗಾಗಿ ಪಟ್ಟಣಕ್ಕೆ ಮತ್ತೊಂದು ವಾಹನ ಸೇವೆಯನ್ನು ನೀಡಬೇಕು ಎಂದರು.