ಮದ್ಯದಂಗಡಿ ತೆರೆಯಲು ಅಭ್ಯಂತರವಿಲ್ಲ liquor-shop

ಮದ್ಯದಂಗಡಿ ತೆರೆಯಲು ಅಭ್ಯಂತರವಿಲ್ಲ liquor-shop
ಮದ್ಯದಂಗಡಿ ತೆರೆಯಲು ಅಭ್ಯಂತರವಿಲ್ಲ liquor-shop
Published on

ಪ್ರಮುಖ ಮುಖ್ಯಾಂಶಗಳು

  • ಕಾರಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್​ ಹೇಳಿಕೆ
ಬಂಗಾರಪೇಟೆ: ಕಾರಹಳ್ಳಿ ಗಾಯತ್ರಿ ಬಡಾವಣೆಯಲ್ಲಿ ಮದ್ಯದಂಗಡಿ (ಸಿಎಲ್​&2) ತೆರೆಯಲು ಯಾವುದೇ ಅಭ್ಯಂತರವಿಲ್ಲ. ಸದಸ್ಯರ ಬಹುಮತದ ಮೂಲಕ ಅಬಕಾರಿ ಇಲಾಖೆಕೆ ಎನ್​ಒಸಿ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾರಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್​ ತಿಳಿಸಿದರು. liquor-shop
ತಾಲೂಕಿನ ಕಾರಹಳ್ಳಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಂಗಡಿಯಿಂದ ಮದ್ಯ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ಇದ್ದು, ಸ್ಥಳದಲ್ಲೇ ಕುಡಿಯಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಎ&ಖಾತೆ ಹಾಗೂ ಬಿ&ಖಾತೆ ಮಾಡಲು ಸರ್ಕಾರದಿಂದ ಆದೇಶ ಬಂದಿದ್ದು, ಯಾವ ರೀತಿ ಮಾಡಬೇಕೆಂಬುದನ್ನು ಸದ್ಯಸರ ಗಮನಕ್ಕೆ ತಂದಿದ್ದೇವೆ. 15ನೇ ಹಣಕಾಸು ಯೋಜನೆಯಡಿ ಪಂಚಾಯಿತಿಗೆ ಇನ್ನೂ ಅನುದಾನ ಬಾರದೆ ಇದ್ದು ಕುಡಿಯುವ ನೀರಿಗೆ ಅಭಾವ ಬಾರದಂತೆ ಯಾವ ರೀತಿ ಕ್ರಮ ವಹಿಸಬೇಕೆಂಬುದರ ಬಗ್ಗೆ ಚರ್ಚಿಸಲಾಗಿದ್ದು, ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದರು.
ಪಂಚಾಯತಿ ವ್ಯಾಪ್ತಿಗೆ ಒಳಪಡುವ ನಾಲ್ಕು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹದಗೆಟ್ಟಿರುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದು, ಸದ್ಯಸರಿಂದಲೂ ಯಾವ ಯಾವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಚೆನ್ನಾಗಿದೆ ಹಾಗೂ ಯಾವ ಗ್ರಾಮಗಳಲ್ಲಿ ಚೆನ್ನಾಗಿಲ್ಲ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಶ್ರೀ ಸರಿಪಡಿಸಲಾಗುವುದು ಎಂದರು.
ನೂತನ ಪಂಚಾಯಿತಿ ಕಟ್ಟಡವನ್ನು ನಿರ್ಮಿಸಲು ದಾನಿಗಳು ಸ್ಥಳ ನೀಡಿದ್ದು, ಅದರ ಮುಂಭಾಗದಲ್ಲಿರುವ ಮೂರು ಗುಂಟೆ ಖಾಸಗಿಯವರ ಜಾಗವಾಗಿದೆ. ಅದನ್ನು ನೀವೇ ತೆಗೆದುಕೊಂಡು ನಮಗೆ ಪರಿಹಾರದ ರೂಪದಲ್ಲಿ ಬೇರೆ ಜಾಗ ನೀಡಿ ಎಂದು ಅವರು ಮನವಿ ಮಾಡಿದ್ದಾರೆ. ಅದಕ್ಕೆ ನಾವು ಸರ್ಕಾರಕ್ಕೆ, ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರ್​ಗೆ ತಿಳಿಸುತ್ತೇವೆ. ಅವರು ಸ್ಥಳ ಕೊಟ್ಟರೆ ನೀವು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net