ವಿದ್ಯುತ್ ಕ್ಷೇತ್ರ ಖಾಸಗೀಕರಣ ಬೇಡ, ಸಂಸದ ಗೋವಿಂದ ಕಾರಜೋಳ

 ಸಂಸದ ಗೋವಿಂದ ಕಾರಜೋಳ
ಸಂಸದ ಗೋವಿಂದ ಕಾರಜೋಳ
Published on
ಬೆಂಗಳೂರು: ರಾಜ್ಯ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಬಾರದು. ಒಂದು ವೇಳೆ ಮಾಡಿದರೆ ರೈತರು ಹೋರಾಟಕ್ಕೆ ಇಳಿಯಲಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೆಇಆರ್‌ಸಿ ಜತೆಗೂಡಿ ಟಾಟಾ ಪವರ್‌ನಂತಹ ಖಾಸಗಿಯವರಿಗೆ ವಿದ್ಯುತ್ ಸರಬರಾಜಿನ ಅವಕಾಶ ಕೊಡುವುದು ರೈತರಿಗೆ ಆತಂಕ ಸೃಷ್ಟಿಸಿದೆ. ಈ ಯೋಜನೆಯಿಂದ ರೈತರು ಬಂಡಾಯ ಏಳುತ್ತಾರೆ. ಈ ಕೂಡಲೇ ಖಾಸಗೀಕರಣ ಕೈಬಿಡಬೇಕೆಂದು ಒತ್ತಾಯಿಸಿದರು.
ಖಾಸಗಿಯವರು ಲೈನ್ ನಿರ್ವಹಣೆ ಮಾಡುತ್ತಿರುತ್ತಾರೆ. ಒಂದು ಲೈನ್ ಸುಟ್ಟುಹೋದರೆ, ಟಿ.ಸಿ. ಸುಟ್ಟುಹೋದರೆ ಅವರು ಕೇಳಿದಷ್ಟು ಹಣ ಕಟ್ಟಿ ದುರಸ್ತಿ ಮಾಡಬೇಕಾಗುತ್ತದೆ. ಖಾಸಗಿ ಕಂಪನಿ ಲಾಭಕ್ಕಾಗಿ ಕೆಲಸ ಮಾಡುತ್ತಾರೆ. ಸರ್ಕಾರ ಇದೀಗ ಐಪಿ ಸೆಟ್ ಕನೆಕ್ಷನ್, ಟಿ.ಸಿ. ಅಳವಡಿಸಲು 2.5 ಲಕ್ಷದಿಂದ 3 ಲಕ್ಷ ರೂ. ಕಟ್ಟಿಸಿಕೊಳ್ಳುತ್ತಿದೆ. ಖಾಸಗಿ ಕಂಪನಿಯವರು 4 ರಿಂದ 5 ಲಕ್ಷ ರೂ. ಬೇಡಿಕೆಯೊಡ್ಡುವ ಸಾಧ್ಯತೆ ಇರುವುದಾಗಿ ಸಂಸದ ಆರೋಪಿಸಿದರು.
ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ 25 ಸಾವಿರ ರೂ. ಪಾವತಿಸಿ ಅರ್ಜಿ ಕೊಟ್ಟರೆ ರೈತರಿಗೆ ಯಾವುದೇ ತೊಂದರೆ ಇಲ್ಲದೆ, ಐಪಿ ಸೆಟ್ ಕನೆಕ್ಷನ್, ಟಿ.ಸಿ. ಅಳವಡಿಸುವ ಕೆಲಸ ಮಾಡುತ್ತಿದ್ದೆವು. ಕಳೆದ 3 ವರ್ಷದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರು 2.5 ಲಕ್ಷದಿಂದ 3 ಲಕ್ಷ ರೂ.ಗಳನ್ನು ಅನ್ನು ವಿದ್ಯುತ್ ಕಂಪನಿಗೆ ಕಟ್ಟಬೇಕಿದೆ. ರೈತಾಪಿ ವರ್ಗ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net