ಬಸವಕಲ್ಯಾಣದಲ್ಲಿ ಹಿಂದಿ ಪ್ರೌಢ ಶಾಲಾ ಶಿಕ್ಷಕರ ಸಂಘದಿಂದ ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿಂದಿ ಉಪನ್ಯಾಸಕ ನರಸಿಂಗರೆಡ್ಡಿ ಗದಲೇಗಾಂವ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಅನಿಲ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ನಾಗಪ್ಪಾ ನಿಣ್ಣೆ, ಮಾಜಿ ಅಧ್ಯಕ್ಷ ಜಗದೀಶ ಶುಕ್ಲಾ, ಪ್ರಮುಖರಾದ ರಾಮ ಮೂಳೆ, ಪರಶುರಾಮ ಕುಂಬಾರೆ, ಚಂದ್ರಕಾಂತ ಕಿವಡೆ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನರಸಿಂಗರಡ್ಡಿ ಗದಲೇಗಾಂವ ಹೇಳಿಕೆ
ಬಸವಕಲ್ಯಾಣದಲ್ಲಿ ಸನ್ಮಾನ ಸಮಾರಂಭ
ಬಸವಕಲ್ಯಾಣ: ಹಿಂದಿ ವಿಷಯಕ್ಕೆ ಅನ್ಯಾಯ ಬೇಡ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ನರಸಿಂಗರಡ್ಡಿ ಗದಲೇಗಾಂವ ಹೇಳಿದರು.
ನಗರದಲ್ಲಿ ಹಿಂದಿ ಪ್ರೌಢ ಶಾಲಾ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಿಂದಿ ವಿಷಯಕ್ಕೆ ಅನ್ಯಾಯ ಆಗಲಾರದಂತೆ ಸರ್ಕಾರ ಗಮನ ಹರಿಸಿ ದ್ವಿಭಾಷೆ ನೀತಿ ಜಾರಿಗೆ ತಂದರೆ ಅದರಲ್ಲಿ ಹಿಂದಿ ಅಥವಾ ಇಂಗ್ಲಿಷ್ ಆಯ್ಕೆ ಮಾಡುವ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ನಾಗಪ್ಪಾ ನಿಣ್ಣೆ, ಮಾಜಿ ಅಧ್ಯಕ್ಷ ಜಗದೀಶ ಶುಕ್ಲಾ, ಪ್ರಮುಖರಾದ ರಾಮ ಮೂಳೆ, ಪರಶುರಾಮ ಕುಂಬಾರೆ, ಚಂದ್ರಕಾಂತ ಕಿವಡೆ ಇತರರಿದ್ದರು. ಸಂಘದ ಸಾಂಸತಿಕ ಕಾರ್ಯದರ್ಶಿ ಅನಿಲ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು.