ನನಗೆ ಕೆಲವು ಭಾಷಾ ಮಿತಿಗಳಿವೆ ಆದರೆ, ಮಾನವ ದುಃಖಗಳಿಗೆ ಇರುವುದು ಒಂದೇ ಒಂದು ಭಾಷೆ ಎಂಬುದು ನನ್ನ ಅಭಿಪ್ರಾಯ. ನನ್ನ ಇಂಗ್ಲಿಷ್ ಅನ್ನು ಟ್ರೋಲ್ ಮಾಡುವವರಿಗೆ ನಾನು ಹೇಳುವುದೇನೆಂದರೆ, ರಾಜ್ಯ ಸರ್ಕಾರವೊಂದು ನಡೆಸಿದ ಭೀಕರತೆಯನ್ನು ನೇರವಾಗಿ ನೋಡಲು ನಾವು ಅಲ್ಲಿಗೆ ಹೋಗಿದ್ದೆವು. ಅಲ್ಲಿ ಸಾವಿರಾರು ದುರ್ಬಲ ಸಂತ್ರಸ್ತರನ್ನು ನಾವು ಕಣ್ಣಾರೆ ನೋಡಿದ್ದೇವೆ. ಅವರೆಲ್ಲರು ಧ್ವನಿರಹಿತರು ಮತ್ತು ನಿರ್ಗತಿಕರು. ನಾನು ಅವರ ಪರವಾಗಿ ನಿಂತಿದ್ದರ ಬಗ್ಗೆ ನನಗೆ ಇನ್ನೂ ಹೆಮ್ಮೆ ಇದೆ. ಇಂದು, ಜಗತ್ತು ಗಮನಿಸದೇ ಹೋಗುತ್ತಿದ್ದ ದೃಶ್ಯಗಳನ್ನು ಟ್ರೋಲ್ನಿಂದಾದರೂ ನೋಡುವಂತಾಗಿದೆ ಎಂದಿದ್ದಾರೆ.