ವೋಟರ್​ಲಿಸ್ಟ್​ನಲ್ಲಿ ಹೆಸರಿಲ್ಲದಿದ್ರೆ ಗ್ಯಾರಂಟಿ ಇಲ್ಲ

ಯಡ್ರಾಮಿ ತಾಲೂಕಿನ ಕಾಚಾಪುರದಲ್ಲಿ ಗ್ಯಾರಂಟಿ ನಡೆ ನಿಮ್ಮ ಮತ ರಕ್ಷಣೆ ಕಡೆ ಕರಪತ್ರ ವಿತರಿಸಲಾಯಿತು. ಮಲ್ಲಿಕಾರ್ಜುನ ಹಲಕರ್ಟಿ, ಬಸ್ಸಣ್ಣ ಮಾಡಗಿ, ಹಣಮಂತ ಕಂಡಕ್ಟರ್​, ಸಿದ್ದನಗೌಡ ಇತರರಿದ್ದರು.
ಯಡ್ರಾಮಿ ತಾಲೂಕಿನ ಕಾಚಾಪುರದಲ್ಲಿ ಗ್ಯಾರಂಟಿ ನಡೆ ನಿಮ್ಮ ಮತ ರಕ್ಷಣೆ ಕಡೆ ಕರಪತ್ರ ವಿತರಿಸಲಾಯಿತು. ಮಲ್ಲಿಕಾರ್ಜುನ ಹಲಕರ್ಟಿ, ಬಸ್ಸಣ್ಣ ಮಾಡಗಿ, ಹಣಮಂತ ಕಂಡಕ್ಟರ್​, ಸಿದ್ದನಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿಕೆ
  • ಯಡ್ರಾಮಿಯಲ್ಲಿ ಮತಹಕ್ಕು ರಕ್ಷಣೆ ಕಾರ್ಯಕ್ರಮ
ಯಡ್ರಾಮಿ: ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗಲ್ಲ. ಹೀಗಾಗಿ ಪ್ರತಿಯೊಬ್ಬರೂ ಎಸ್​ಐಆರ್​ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಕರ್ಟಿ ತಿಳಿಸಿದರು.
ಕಾಚಾಪುರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮತ ಹಕ್ಕು ರಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ರಾಜ್ಯದೆಲ್ಲೆಡೆ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ ಆರಂಭಿಸಿದೆ. ಬಿಎಲ್​ಒಗಳು ಮನೆ&ಮನೆಗೆ ತೆರಳಿ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಅದರಲ್ಲಿ ಸರಿಯಾದ ಮಾಹಿತಿ ತುಂಬಿ ಮತದಾನದ ಹಕ್ಕು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಿತಿ ಸದಸ್ಯರಾದ ಮಹಿಬೂಬ್​ ಮನಿಯಾರ್​, ಮಲಕಣ್ಣ ಸಿಡ್ಲಿ, ಹಣಮಂತರಾಯ ಹೆಡಗಿಜೋಳ, ಇಸ್ಮಾಯಿಲ್​ ಪಟೇಲ್​, ಸೈದಪ್ಪ ಇಜೇರಿ, ಭೀಮಣ್ಣ ಪೂಜಾರಿ, ಮಹಾಂತಪ್ಪ ದೊರಿ, ಹಸನ್​ ಪಟೇಲ್​, ಕಾವೇರಿ ಮಾಲಿಪಾಟೀಲ್​, ಪ್ರಮುಖರಾದ ಬಸ್ಸಣ್ಣ ಮಾಡಗಿ, ಹಣಮಂತ ಕಂಡಕ್ಟರ್​, ಸಿದ್ದನಗೌಡ, ಅಮೃತಗೌಡ, ಗುರಣ್ಣ ದೊಡ್ಡಮನಿ, ಬಂದೆನವಾಜ್​ ಚಿಗರಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net