ಯಾದಗಿರಿ ಅಭಿವೃದ್ಧಿಯಲ್ಲಿ ರಾಜಿ ಇಲ್ಲ

ಯಾದಗಿರಿಯಲ್ಲಿ ಶುಕ್ರವಾರ ಕರೆದಿದ್ದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿದರು. ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರಡ್ಡಿ ಪಾಟೀಲ್ ತುನ್ನೂರ, ರಾಜಾ ವೇಣುಗೋಪಾಲ ನಾಯಕ, ಸಂಸದ ರಾಧಾಕೃಷ್ಣ ದೊಡ್ಡಮನಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಡಿಸಿ ರಾಹುಲï ತುಕಾರಾಮ ಪಾಂಡ್ವೆ, ಎಸ್‌ಪಿ ಪೃಥ್ವಿಕ್ ಶಂಕರ್ ಇದ್ದರು.
ಯಾದಗಿರಿಯಲ್ಲಿ ಶುಕ್ರವಾರ ಕರೆದಿದ್ದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿದರು. ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರಡ್ಡಿ ಪಾಟೀಲ್ ತುನ್ನೂರ, ರಾಜಾ ವೇಣುಗೋಪಾಲ ನಾಯಕ, ಸಂಸದ ರಾಧಾಕೃಷ್ಣ ದೊಡ್ಡಮನಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಡಿಸಿ ರಾಹುಲï ತುಕಾರಾಮ ಪಾಂಡ್ವೆ, ಎಸ್‌ಪಿ ಪೃಥ್ವಿಕ್ ಶಂಕರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿಕೆ
  • ವಿವಿಧ ಕರ‍್ಯದರ್ಶಿ-ಆಯುಕ್ತರಿಗೆ ಸೂಚನೆ
ಯಾದಗಿರಿ: ಇಲ್ಲಿನ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಗಿರಿ ಜಿಲ್ಲೆಯ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಕೆಲಸಕ್ಕೆ ನಾಂದಿ ಹಾಡಿತು.
ಸುಮಾರು ಒಂದು ವರ್ಷದ ಬಳಿಕ ನಡೆದ ಈ ಸಭೆಯಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವರು, ಇಲಾಖಾವಾರು ಪಡೆದ ಮಾಹಿತಿ, ಅಧಿಕಾರಿಗಳಿಗೆ ಕೇಳಿದ ಪ್ರಶ್ನೆಗಳು, ಅವರಿಂದ ಬಂದ ಉತ್ತರದಿಂದ ತೃಪ್ತಿಗೊಳ್ಳದೆ ನೇರವಾಗಿ ಆಯಾ ಇಲಾಖೆ ಕಾರ್ಯದರ್ಶಿ ಮತ್ತು ಆಯುಕ್ತರೊಂದಗೆ ಸ್ಥಳದಲ್ಲಿಯೇ ಮೊಬೈಲ್ ಮೂಲಕ ಮಾತನಾಡಿ, ನನೆಗುದಿಗೆ ಬಿದ್ದ ಕೆಲಸ ಶೀಘ್ರ ಮಾಡುವಂತೆ ತಾಕೀತು ಮಾಡಿದ್ದು, ಇದನ್ನು ಗಮನಿಸಿದ ೪೨ ಇಲಾಖೆಗೆ ಅಧಿಕಾರಿಗಳಲ್ಲಿ ಸಂಚಲನ ಮೂಡಿಸಿದರೇ, ಅಲ್ಲಿದ್ದ ಜನಪ್ರತಿನಿಽಗಳು, ಇತರೇ ನಾಮನಿರ್ದೇಶಿತ ಅಧ್ಯಕ್ಷರುಗಳಲ್ಲಿ ಅಭಿವೃದ್ಧಿ ಕೆಲಸಗಳ ವಿಶ್ವಾಸ ಮೂಡಿಸಿದ್ದು ಕಂಡು ಬಂತು.
ಬೆಳಗ್ಗೆ ೧೧.೪೫ರ ಸುಮಾರಿಗೆ ಸಭೆ ಆರಂಭವಾಗಿದ್ದು ರಾತ್ರಿ ೭ರತನಕ ಬಹುತೇಕ ಇಲಾಖೆಗಳ ಪರಿಶೀಲನೆಯನ್ನು ಸಚಿವರು ಮಾಡಿದರು. ಅನೇಕ ಇಲಾಖೆಗಳ ಬಗ್ಗೆ ಅಧಿಕಾರಿಗಳು ವಿವರಣೆ ನೀಡುವಾಗ ಅದರಲ್ಲಿ ತಪ್ಪು ಮಾಹಿತಿ ಮತ್ತು ದೋಷ ಕಂಡುಂದಾಗ ಅಲ್ಲಿಯೇ ಇದ್ದ ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರಡ್ಡಿ ಪಾಟೀಲ್ ತುನ್ನೂರ, ರಾಜಾ ವೇಣುಗೋಪಾಲ ನಾಯಕ ಅವರು ಮಧ್ಯ ಪ್ರವೇಶಿಸಿ ಸರಿಪಡಿಸುವ ಬಗ್ಗೆ ಸಚಿವರ ಗಮನಕ್ಕೆ ತಂದರು.
ಮಳೆ ಇಲ್ಲದೆ ತೀವ್ರ ನೀರಿನ ಸಮಸ್ಯೆ ಹಾಗೂ ಬೆಳೆ ಹಾನಿಯಿಂದ ಬಳಲುತ್ತಿರುವ ರೈತರಿಗೆ ಸಹಾಯಹಸ್ತ ಚಾಚುವ ಕಾರ್ಯ ಅಧಿಕಾರಿಗಳು ಮಾಡುವಂತೆ ತಾಕೀತು ಮಾಡಿದರು. ಬೆಳೆ ವಿಮೆ ಮಾಡಿಸುವುದಷ್ಟೇ ಅಲ್ಲದೆ ಸಕಾಲಕ್ಕೆ ಅದು ಅವರಿಗೆ ನೆರವಾಗಬೇಕು. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸಕಾಲದಲ್ಲಿ ಪರಿಹಾರ ದೊರೆಯಬೇಕು. ಬಾಕಿ ಪ್ರಕರಣಗಳಲ್ಲಿ ತುರ್ತಾಗಿ ಪರಿಹಾರ ದೊರೆಯುವಂತೆ ಅಽಕಾರಿಗಳು ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.
ರೈತರಿಗೆ ಕೃಷಿ ಸಲಕರಣೆ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಜತೆಗೆ ರೈತರ ಬೇಡಿಕೆಯ ಕಂಪನಿಯ ಗುಣಮಟ್ಟದ ಸ್ಪ್ರಿಂಕ್ಲಿರ್, ಇತರೆ ಸಾಧನ-ಸಲಕರಣೆ ವಿತರಣೆಯಾಗುವಂತೆ ನೋಡಿಕೊಳ್ಳಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗಿ ನಿಲ್ಲಬೇಕು ಎಂದರು. ೨೦೨೪ರಿಂದ ಬಾಕಿ ಶಾಲಾ ಕೊಠಡಿ ನಿರ್ಮಾಣ, ಕೊಠಡಿ ದುರಸ್ತಿ, ಶೌಚಗೃಹ ನಿರ್ಮಾಣ, ಅಂದಾಜು ಪತ್ರಿಕೆ ತಕ್ಷಣ ತಯಾರಿಸಬೇಕು. ಬಾಕಿ ಶಾಲಾ ಕೊಠಡಿ ನಿರ್ಮಾಣ ಹಾಗೂ ದುರಸ್ತಿ ಕಾರ್ಯ, ಶೌಚಗೃಹ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಸಂಬಂಸಿದ ಅಧಿಕಾರಿಗಳಿಗೆ ಸಚಿವರು ಹೇಳಿದರು.
ಸಭೆಯಲ್ಲಿ ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರಡ್ಡಿ ಪಾಟೀಲ್ ತುನ್ನೂರ, ರಾಜಾ ವೇಣುಗೋಪಾಲ ನಾಯಕ, ಸಂಸದ ರಾಧಾಕೃಷ್ಣ ದೊಡ್ಡಮನಿ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ, ಡಿಸಿ ರಾಹುಲ್ ತುಕಾರಾಮ ಪಾಂಡ್ವೆ, ಎಸ್‌ಪಿ ಪೃಥ್ವಿಕ್ ಶಂಕರ್ ಸೇರಿ ಜಿಲ್ಲಾಮಟ್ಟದ ಅಽಕಾರಿಗಳು ಭಾಗವಹಿಸಿದ್ದರು.

ಐದು ಕೈಗಾರಿಕೆ ಮುಚ್ಚಲು ಸೂಚನೆ

ಗುರುಮಠಕಲ್ ತಾಲೂಕಿನ ಕಡೆಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಕೈಗಾರಿಕೆಗಳ ಮೂಲಕ ಜಲ ಮೂಲಗಳು, ನಾಲಾಕ್ಕೆ ಅಪಾಯಕಾರಿ ರಾಸಾಯನಿಕ ಮಿಶ್ರಣವಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಇದಕ್ಕೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಚಳಿ ಬಿಡಿಸಿದರು. ಆಯಾ ಕೈಗಾರಿಕೆಗಳಿಂದ ಸಮರ್ಪಕವಾಗಿ ರಾಸಾಯನಿಕ ವಿಲೇವಾರಿ ಬಗ್ಗೆ ಕ್ರಮ ಆಗಬೇಕು. ವಿವಿಧ ಟ್ಯಾಂಕರ್ ಮೂಲಕ ವಿವಿಧೆಡೆ ರಾಸಾಯನಿಕ ಚೆಲ್ಲದಂತೆ ನಿಗಾ ವಹಿಸಬೇಕು. ಇಂತಹ ರಾಸಾಯನಿಕ ನೀರಿಗೆ ಮಿಶ್ರಣ ಮಾಡುತ್ತಿರುವ ಹಾಗೂ ಬೂದು ಮಿಶ್ರಿತ ಹೊಗೆಸೂಸಿ ರೈತರ ಬೆಳೆ ಹಾನಿ ಮಾಡುತ್ತಿರುವ ಕೈಗಾರಿಕೆಗಳ ಪರಿಶೀಲನೆಗೆ ವಿಶೇಷ ತಂಡ ನಿಯೋಜಿಸಿ ಪರಿಶೀಲಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜನರು, ರೈತರು ಮತ್ತು ಮಕ್ಕಳ ಜೀವದ ಜತೆ ಚಲ್ಲಾಟ ಸಹಿಸಲಾಗಲ್ಲ. ಈಗಾಗಲೇ ಈ ಭಾಗದ ೫ ಕೈಗಾರಿಕೆ ಮುಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರಸ್ತಾವನೆ ಹೋಗಿದ್ದು, ತಕ್ಷಣ ಈ ಕುರಿತು ಆದೇಶ ನೀಡುವಂತೆ ಮಂಡಳಿ ನಿರ್ದೇಶಕರಿಗೆ ದೂರವಾಣಿ ಮೂಲಕ ಸಚಿವರು ಸೂಚನೆ ನೀಡಿದರು.

ರೇಷ್ಮೆ ಇಲಾಖೆ ಅಽಕಾರಿಗಳ ವಿರುದ್ಧ ಶಿಸ್ತು ಕ್ರಮ

ರೇಷ್ಮೆ ಇಲಾಖೆಯಿಂದ ನಿಗದಿತ ಗುರಿ ಸಾಧಿಸದಿರುವುದರಿಂದ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ ನೀಡಿ, ಪಶು ಸಂಗೋಪನಾ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಮುಂಜಾಗ್ರತೆಯಿಂದ ಕಾರ್ಯನಿರ್ವಹಿಸಿ ಸಮರ್ಪಕ ಮೇವು ಇರುವಂತೆ ನೋಡಿಕೊಳ್ಳಬೇಕು. ಸಿಬ್ಬಂದಿ ಹಾಗೂ ವಾಹನಗಳ ಬೇಡಿಕೆ ಪ್ರಸ್ತಾವನೆ ಕೇಂದ್ರ ಕಚೇರಿಗೆ ಕಳುಹಿಸಬೇಕು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ತೋಟಗಾರಿಕೆಗೆ ವಿಪುಲ ಅವಕಾಶಗಳಿದ್ದು, ಈವರೆಗೆ ಶೇ.೨೦ ನೀರಾವರಿ ಪ್ರದೇಶದಲ್ಲಿ ಅಭಿವೃದ್ಧಿ ಹೊಂದಬೇಕಿತ್ತು. ಜಿಲ್ಲೆಯಲ್ಲಿ ಶೇ.೩ ಪ್ರದೇಶದಲ್ಲಿ ಮಾತ್ರ ತೋಟಗಾರಿಕೆ ಪ್ರದೇಶ ಅಭಿವೃದ್ಧಿ ಹೊಂದಿರುವುದರಿಂದ ಸಂಬಧಿಸಿದ ಇಲಾಖೆ ಅಧಿಕಾರಿಗಳು ಮುಂದಾಲೋಚನೆಯ ಯೋಜನೆ ರೂಪಿಸಬೇಕು ಎಂದು ಹೇಳಿದರು.

ಡಿಸೆಂಬರ್‌ವರೆಗೆ ಪೂರ್ಣಗೊಳಿಸಿ

ಜಲಜೀವನ್ ಮಿಷನ್ ಯೋಜನೆಯಡಿ ಗುಣಮಟ್ಟದ ಕಾಮಗಾರಿ ಬರುವ ಡಿಸೆಂಬರ್‌ವರೆಗೆ ಪೂರ್ಣಗೊಳಿಸಬೇಕು. ಜಲಧಾರೆ ಯೋಜನೆಯಡಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ತಾಲೂಕುವಾರು ಕಾಮಗಾರಿ ಪೂರ್ಣಗೊಂಡ ಬಗ್ಗೆ ಆಯಾ ಶಾಸಕರಿಗೆ ಪಟ್ಟಿ ನೀಡಬೇಕು. ಅರಣ್ಯ ಇಲಾಖೆ ವ್ಯಾಪ್ತಿಯ ಕಾಮಗಾರಿಗಳಿಗೆ ಸಂಬಧಿಸಿದಂತೆ ನಿರಪೇಕ್ಷಣಾ ಪತ್ರ ಪಡೆದು ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ನಕಲಿ ವೈದ್ಯರ ಮೇಲೆ ನಿಗಾ ಇಡಿ

ಜಿಲ್ಲೆಯಲ್ಲಿನ ಎಲ್ಲ ಗರ್ಭಿಣಿಯರ ಟ್ರ‍್ಯಾಕಿಂಗ್ ವ್ಯವಸ್ಥೆ ಸರಿಯಾಗಿರಬೇಕು. ನೊಂದಣಿ ಮತ್ತು ಡೇಟಾ ಎಂಟ್ರಿ ಸರಿಯಾಗಿ ಮಾಡಬೇಕು. ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡುವ ಆಸ್ಪತ್ರೆಗಳ ವಿರುದ್ಧ ಕಾಯ್ದೆ ಅನ್ವಯ ಕ್ಲೋಸ್‌ಗೆ ಕ್ರಮ ಕೈಗೊಳ್ಳುವ ಜತೆಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ ಜಿಲ್ಲೆಯಲ್ಲಿ ನಕಲಿ ವೈದ್ಯರ ಮೇಲೆಯೂ ಸೂಕ್ತ ನಿಗಾ ಇರಿಸಬೇಕು ಎಂದು ಸೂಚನೆ ನೀಡಿದರು.

ಜೂಜಾಟ, ಅಕ್ರಮ ಮದ್ಯ, ಮಟಕಾ ನಿಲ್ಲಬೇಕು

ಜಿಲ್ಲೆಯಲ್ಲಿ ಜೂಜಾಟ, ಮಟಕಾ ಎಗ್ಗಿಲ್ಲದೆ ನಡೆಯುತ್ತಿದೆ. ಬಹುತೇಕ ಹಳ್ಳಿಗಳಲ್ಲಿ ಅಕ್ರಮ ಮದ್ಯದ ಮಾರಾಟ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿರುವ ಬಗ್ಗೆ ಅನೇಕ ದೂರು ಬಂದಿವೆ. ಈ ಕ್ಷಣದಲ್ಲಿಯೇ ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸುವ ಮೂಲಕ ಈ ಅಕ್ರಮ ದಂಧೆಗೆ ಸಂಪೂರ್ಣ ಕಡಿವಾಣ ಬೀಳಬೇಕು. ನಿರ್ಲಕ್ಷ್ಯವಹಿಸಿದರೆ ಸಂಬAಧಪಟ್ಟ ಅಽಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಾಸಕ ಕಂದಕೂರ ಗೈರು ಅಧಿಕಾರಿಗಳು ನಿರಾಳ

ಸಂಪೂರ್ಣ ಗಿರಿಜಿಲ್ಲೆ ಬರಪೀಡಿತ ಘೋಷಣೆ ಮಾಡದ ಸರ್ಕಾರ ಕ್ರಮ ಖಂಡಿಸಿ ಕೆಡಿಪಿ ಸಭೆ ಬಹಿಷ್ಕರಿಸಿದ ಶಾಸಕ ಶರಣಗೌಡ ಕಂದಕೂರ ಅವರ ಅನುಪಸ್ಥಿತಿ ಸಭೆ ದೊಡ್ಡಮಟ್ಟದಲ್ಲಿ ಎದ್ದು ಕಾಣಿಸಿತು. ಕಾರಣ ಕಳೆದ ಮೂರು ವರ್ಷಗಳಲ್ಲಿ ಇಂತಹ ಸಭೆಗಳ ನಡೆದಾಗ ಪ್ರತಿಪಕ್ಷದ ಶಾಸಕನಾಗಿ ಅನೇಕ ವಿಷಯ ದಾಖಲೆ ಸಮೇತವಾಗಿ ಮಾತನಾಡುವ ಮೂಲಕ ಸರ್ಕಾರಕ್ಕೆ ಇಕ್ಕಟಿಗೆ ಸಿಲುಕಿಸಿದರೆ ಅಽಕಾರಿಗಳಿಗೆ ಚಳಿ ಬಿಡಿಸುವ ಕೆಲಸ ಮಾಡಿದ್ದರು. ಆದರೆ ಇಂದಿನ ಸಭೆಯಲ್ಲಿ ಅವರು ಗೈರಾಗಿದ್ದರಿಂದ ಅನೇಕ ಇಲಾಖೆಗಳ ಅಽಕಾರಿಗಳ ಮುಖದಲ್ಲಿ ನಿರಾಳತೆ ಕಂಡು ಬಂತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net