ಬೂದಿಕೋಟೆ: ಗ್ರಾಮೀಣ ಪ್ರದೇಶಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಸ್ಥಾಪನೆಯಿಂದ ರೈತರಿಗೆ ಉತ್ತಮ ಮಾರುಕಟ್ಟೆ ದೊರೆಯುವುದರ ಜತೆಗೆ ಸ್ಥಳಿಯ ವ್ಯಾಪಾರವೂ ಅಭಿವೃದ್ಧಿಯಾಗಲಿದೆ ಎಂದು ಕೋಲಾರ ಹಾಲು ಒಕ್ಕೂಟದ ಕೆಜಿಎಫ್ ಕ್ಷೇತ್ರದ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿದರು.
ಬಂಗಾರಪೇಟೆ ತಾಲೂಕು ಗುಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಹೊಸಹಳ್ಳಿಯಲ್ಲಿ ನಂದಿನಿ ಮಳಿಗೆ ಉದ್ಘಾಟಿಸಿ ಮಾತನಾಡಿ, ನಂದಿನಿ ಉತ್ಪನ್ನಗಳನ್ನು ರೈತರು ಸಂಘಕ್ಕೆ ಪೂರೈಕೆ ಮಾಡುವ ಹಾಲಿನಲ್ಲಿಯೇ ತುಪ್ಪ ತಯಾರು ಮಾಡಲಾಗುತ್ತಿದೆ. ಬೇರೆ ಕಡೆಗಳಲ್ಲಿ ಕಲಬೆರಿಕೆ ಎಣ್ಣೆ ಮಿಶ್ರಣ ಮಾಡುತ್ತಿರುವುದರಿಂದ ಅನೇಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ ಹಾಗಾಗಿ ನಿಮ್ಮದೇ ಉತ್ಪನ್ನಗಳಲ್ಲಿ ಒಂದಾಗಿರುವ ನಂದಿನಿ ಸ್ಯಾಂಡಲ್ ಉಪಯೋಗಿಸಿದರೆ ರೈತರಿಗೂ ಲಾಭ ದೊರೆಯುತ್ತದೆ ಎಂದರು.
ಎಲ್ಲ ತರಹದ ಸಿಹಿ ತಿಂಡಿಗಳು ಹಾಗೂ ಕಾರದ ಉತ್ಪನ್ನಗಳನ್ನು ಸಹ ನಂದಿನಿ ಬ್ರಾ$್ಯಂಡ್ನಲ್ಲಿ ತಯಾರಿ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ನಂದಿನಿ ಬ್ರಾ$್ಯಂಡ್ ಉಪಯೋಗಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅಗತ್ಯವಿರುವ ಮಿಲ್ಕಿಂಗ್ ಮಿಷಿನ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ಒಕ್ಕೂಟ ಬದ್ಧವಾಗಿದೆ ಎಂದರು.
ಮುಖಂಡರಾದ ಸಿ.ವೆಂಕೋಬರಾವ್, ಮೊಲಜಿ ರಾವ್, ಆನಂದ್ ರೆಡ್ಡಿ, ಬೊಪ್ಪನಹಳ್ಳಿ ರವಿಮೂರ್ತಿ, ನಾಗರಾಜ್ಗೌಡ ಇದ್ದರು.