ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ "ನಿಸರ್ಗ' ಸಾಧನೆ / DODABALLAPUR

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ&2026ರಲ್ಲಿ ವಿಜೇತರಾದ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳನ್ನು ರಾಜ್ಯ ಅಮೆಚೂರ್​ ಯೋಗ ಸ್ಪೋರ್ಟ್ಸ್​ ಅಸೋಸಿಯೇಷನ್​ ಜಿ.ಎನ್​.ಕೃಷ್ಣಮೂರ್ತಿ ಸನ್ಮಾನಿಸಿದರು. ಅಧ್ಯಕ್ಷ ಡಾ.ಪಿ.ಎನ್​. ಗಣೇಶ್​ ಕುಮಾರ್​, ಗೌರವ ಕಾರ್ಯದರ್ಶಿ ಎ.ನಟರಾಜ್​, ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಷನ್​ ಅಧ್ಯಕ್ಷ ಅನಿಲ್​ ಕರಿಯ, ಯಲ್ಲಾಪುರ ತಾಲೂಕು ಯೋಗ ಅಸೋಸಿಯೇಷನ್​ ಅಧ್ಯಕ್ಷ ಶಂಕರ್​ ಭಟ್​ ಇದ್ದರು.

Published on
ದೊಡ್ಡಬಳ್ಳಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಇತ್ತೀಚೆಗೆ ಕರ್ನಾಟಕ ಅಮೆಚೂರ್​ ಯೋಗ ಸ್ಪೋರ್ಟ್ಸ್​ ಅಸೋಸಿಯೇಷನ್​ನಿಂದ ಆಯೋಜಿಸಿದ್ದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತಾಲೂಕಿನ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ಎ.ನಟರಾಜ್​ ತಿಳಿಸಿದರು.
ನಗರದ ನಿಸರ್ಗ ಯೋಗ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಧಕ ಯೋಗಪಟುಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, 8ರಿಂದ 10 ವರ್ಷದ ಬಾಲಕಿಯರ ವಿಭಾಗದಲ್ಲಿ ಕೆ.ಸಾನ್ವಿ (ಪ್ರಥಮ), ಎಂ.ಎಚ್​.ಹನಿಕಾ (ದ್ವೀತಿಯ), ಸಾನ್ವಿತಾ (ನಾಲ್ಕನೇ), ಇ.ನಿಹಾರಿಕಾ (5ನೇ) ಎನ್​.ಡಿ.ತ್ರಿಷಿಕಾ (6ನೇ), 8ರಿಂದ 10ವರ್ಷದ ಬಾಲಕರ ವಿಭಾಗದಲ್ಲಿ ಡಿ.ಎಂ.ಆರ್ಯ (ದ್ವೀತಿಯ), ಕೆ.ಎನ್​.ಋತ್ವಿಕ್​ (ತೃತೀಯ) ಎಚ್​.ಯದ್ವಿಕ್​ (ನಾಲ್ಕನೇ) ಕುಶ್ವಂತ್​ (5ನೇ), ಖ.ಸಿರೀಶ್​ ಪುಟ್ಟಣ್ಣ (6ನೇ) ಸ್ಥಾನ ಪಡೆದಿದ್ದಾರೆ. 10ರಿಂದ12 ವರ್ಷದ ಬಾಲಕಿಯರ ವಿಭಾಗದಲ್ಲಿ ಅಪೂರ್ವ (ದ್ವೀತಿಯ), ಎನ್​.ಖುಷಿ ಪ್ರಿಯ (ತೃತೀಯ), ಸಾನ್ವಿ ವಿಜಯ್​ (ನಾಲ್ಕನೇ), ಎಂ.ಅಖಿಲ (6ನೇ) ಸ್ಥಾನ ಹಾಗೂ ಬಾಲಕರ ವಿಭಾಗದಲ್ಲಿ ಎಸ್​.ಯಶ್ವಿನ್​ (ದ್ವೀತಿಯ), ಬಿ.ಎಸ್​.ಭಾರ್ಗವ (4ನೇ) ಸ್ಥಾನ ಪಡೆದಿದ್ದಾರೆ. 12ರಿಂದ 14 ವರ್ಷದ ಬಾಲಕಿಯರ ಭಾಗದಲ್ಲಿ ಎಚ್​.ಆರ್​.ಗೌತಮಿ (ಪ್ರಥಮ) ಕೆ.ಎಂ.ಹಿತಶ್ರೀ (ದ್ವೀತಿಯ), ಬಾಲಕರ ವಿಭಾಗದಲ್ಲಿ ಜೆ.ಸಿ.ವೇದಿಕ್​ ಶೆಟ್ಟಿ (ಪ್ರಥಮ), ಎಸ್​.ಕುಶಲ್​ (ದ್ವೀತಿಯ), ಎ.ಹಿತೇಶ್​ (5ನೇ), ಜಿ.ಆರ್​.ನವನೀತ್​ (6ನೇ) ಸ್ಥಾನ ಪಡೆದಿದ್ದಾರೆ. 14 ರಿಂದ 16 ವರ್ಷದ ಬಾಲಕರ ವಿಭಾಗದಲ್ಲಿ ಪಿ.ಎಸ್​.ಶಶಾಂಕ್​ (ಪ್ರಥಮ), ಕೆ.ಎನ್​.ವಿಶ್ವನಾಥ್​ (ನಾಲ್ಕನೇ) ಸ್ಥಾನ, ಹಾಗೂ 16 ರಿಂದ 18 ವರ್ಷದ ಯುವತಿಯರ ವಿಭಾಗದಲ್ಲಿ ಅರದೇಶಹಳ್ಳಿಯ ಆರ್​.ಅರ್ಪಿತಾ (ಪ್ರಥಮ), 18 ರಿಂದ 21 ವರ್ಷದ ಯುವತಿಯವರ ವಿಭಾಗದಲ್ಲಿ ಎಂ.ಆರ್​.ಜಾಹ್ನವಿ (ದ್ವೀತಿಯ), 21ರಿಂದ 25 ವರ್ಷದ ವಿಭಾಗದಲ್ಲಿ ಪಿ.ವಿ.ವರ್ಷಿಣಿ (5ನೇ) ಸ್ಥಾನ ಪಡೆದಿದ್ದಾರೆ ಎಂದರು.
ಯೋಗಪಟುಗಳನ್ನು ಬೆಂಗಳೂರು ಗ್ರಾಮಾಂತರ ಅಮೆಚೂರ್​ ಯೋಗಾಸನ ಕ್ರೀಡಾ ಸಂಸ್ಥೆ ಅಧ್ಯಕ್ಷ ಎಂ.ಜಿ.ಅಮರನಾಥ್​, ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷೆ ಎಂ.ಎ.ಲಕ್ಷಿ$್ಮ ರವೀಂದ್ರ, ಕಾರ್ಯದರ್ಶಿ ಯೋಗ ನಟರಾಜ್​, ಖಜಾಂಚಿ ಕೆ.ಆರ್​.ಶಾಮ್​ ಸುಂದರ್​, ಯೋಗ ಶಿಕ್ಷಕ ಮಂಜುನಾಥ್​ ಸನ್ಮಾನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net