ಯುವ ಸಮುದಾಯದ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು. ಆದರೆ, ಪ್ರತಿಭೆಗಳನ್ನು ತಮ್ಮದಾಗಿಸಿಕೊಳ್ಳಲು ದುಷ್ಟ ಶಕ್ತಿಗಳು ಕಾಯುತ್ತಿರುತ್ತವೆ. ಪ್ರತಿಭೆಯನ್ನು ವಿದ್ರೋಹದ ಕಾರ್ಯಕ್ಕೆ ಬಳಸಲಾಗುತ್ತಿದೆ. ಸಹಾಯ, ದಾನ ಪಡೆಯುವಾಗ ಎಚ್ಚರಿಕೆಯಿಂದ ಇರಬೇಕು. ಋಣದ ಭಾರಕ್ಕೆ ಸಿಲುಕಿ ಪ್ರತಿಭೆ ಬೇರೆಯವರ ಪಾಲಾಗಬಾರದು.ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್, ಯಹೂದಿಗಳ ಪ್ರತಿಭೆಯನ್ನು ಗೌರವಿಸದೆ ಅವಿವೇಕ ತೋರಿದ. ಯಹೂದಿಗಳ ಮಾರಣಹೋಮ ನಡೆಸಿದ್ದ. ಅದ್ದರಿಂದ, ಐನ್ಸ್ಟೈನ್ ಸೇರಿ ಸಾವಿರಾರು ಮಹಾನ್ ಪ್ರತಿಭಾವಂತರು ಅಮೆರಿಕದಲ್ಲಿ ಆಶ್ರಯ ಪಡೆದರು. ಆರ್ಥಿಕವಾಗಿ ತವಳುತ್ತಿದ್ದ ಅಮೆರಿಕ ಶಕ್ತಿಶಾಲಿ ದೇಶವಾಯಿತು ಎಂದು ಶ್ರೀಗಳು ಹೇಳಿದರು.