ಶ್ರೀಗಂಧ ಮತ ಕಳ್ಳತನ ತಡೆಗೆ ಸುಧಾರಿತ ಉಪಕರಣ ಅಥವಾ ಆಧುನಿಕ ತಂತಜ್ಞಾನಗಳ ಮಾಹಿತಿ ಹೊಂದಿರುವ ರೈತರು, ವಿಜ್ಞಾನಿಗಳು ಹಾಗೂ ಸಂಸ್ಥೆಗಳಿಗೆ ಕೆಎಸ್‌ಡಿಎಲ್ ಅನ್ನು ಸಂಪರ್ಕಿಸಿ ಮಾಹಿತಿ ಹಂಚಿಕೊಳ್ಳಬಹುದು. ಸಂಸ್ಥೆಯ ಮುಂದೆ ಹೊಸ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ನೀಡಲು ಅವಕಾಶವಿದೆ. ಪ್ರಸ್ತಾಪಿತ ಪರಿಹಾರಗಳು ಸೂಕ್ತ ಮತ್ತು ಪರಿಣಾಮಕಾರಿ ಎಂದು ಕಂಡುಬಂದರೆ, ಅವುಗಳನ್ನು ಪರಿಗಣಿಸಿ ಜಾರಿಗೆ ತರಲಾಗುತ್ತದೆ. ಇದಕ್ಕೆ ಬೇಕಾಗುವ ವೆಚ್ಚವನ್ನು ಕೆಎಸ್‌ಡಿಎಲ್ ಭರಿಸಲಿದೆ ಎಂದು ಪಾಟೀಲ್ ವಿವರಿಸಿದರು.