ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ತಾಲೂಕು ಆಸ್ಪತ್ರೆ ಪಟ್ಟಣದ ಸಮೀಪ ಆಗಬೇಕು ಎಂಬುದು ಎಲ್ಲರ ಬೇಡಿಕೆಯಾಗಿತ್ತು. ಆ ನಿಟ್ಟಿನಲ್ಲಿ ಹೋರಾಟದ ಮೂಲಕ ಸರ್ಕಾರ ಎಚ್ಚರಿಸುವ ಕೆಲಸ ಮಾಡಲಾಗಿತ್ತು. ಇಂದು ಜನಸಾಮಾನ್ಯರಿಗೆ ಸೇವೆ ತಲುಪುವ ರೀತಿ ಪಟ್ಟಣದ ಸಮೀಪ ನಿರ್ಮಾಣ ಮಾಡಲಾಗುತ್ತಿದೆ. ಈ ಮೊದಲು 50 ಹಾಸಿಗೆ ಆಸ್ಪತ್ರೆಗೆ ಇದ್ದ ಅನುಮೋದನೆಯನ್ನು ಹೆಚ್ಚಿಸಿ 33.5 ಕೋಟಿ ರೂ. ಅನುದಾನದಲ್ಲಿ 100 ಹಾಸಿಗೆ ಆಸ್ಪತ್ರೆಯನ್ನು ಮಾಡಲಾಗುತ್ತಿದೆ. ಇದರಿಂದ ಬಡ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ರಾಜಗುರು ಕಲ್ಮಠದ ಮಡಿವಾಳ ರಾಜ ಯೋಗೇಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀ ಗುರು ಮಡಿವಾಳೇಶ್ವರ ಮಠದ ಪಂಚಾರಿ ಸ್ವಾಮೀಜಿ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಉಪಾಧ್ಯ ಸುನಿಲ ಹನುಮಣ್ಣವರ, ಪಪಂ ಅಧ್ಯ ಜಯಸಿದ್ಧರಾಮ ಮರಿಹಾಳ, ವಿಭಾಗಿಯ ಸಹ ನಿರ್ದೇಶಕರು ಪುಷ್ಪಲತಾ ದೊಡ್ಡಮನಿ, ಎಇಇ ಚಿದಾನಂದ್ ಯಾದಗುಡಿ, ಜಿಲ್ಲಾ ಆರೋಗ್ಯ ಅಧಿಕಾರಿ ಈಶ್ವರ್ ಗಡಾದ, ತಾಲೂಕ ಆರೋಗ್ಯ ಅಧಿಕಾರಿ ಸಂಜಯ ಸಿದ್ದನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯ ಸಂಗನಗೌಡ ಪಾಟೀಲ, ಶಂಕರ್ ಹೊಳಿ ಇತರರಿದ್ದರು.