ಹೌದು, ಒಂದು ಕಿಲೋ ಮೀಟರ್ಗೆ ಆಟೋ, ಸ್ಕೂಟರ್ ಬುಕ್ ಮಾಡಿಕೊಂಡು ಹೋಗುವ ಬದಲಿಗೆ ನಡೆದು ಹೋಗಿ. ನಿಮ್ಮ ಸ್ನೇಹಿತರಿಗೆ ಈ ಜೂನ್ ಮಾಸದಲ್ಲಿ ಒಂದು ಕಿಲೋ ಮೀಟರ್ ನಡೆಯುವ ಸವಾಲು ಹಾಕಿ ಎಂದು Greater Bengaluru Authority (GBA) ಶನಿವಾರ ವಿಡಿಯೋ ಹಂಚಿಕೊಂಡಿದೆ. ಪೋಸ್ಟ್ ವೈರಲ್ ಆಗುತ್ತಲೇ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ರಸ್ತೆಗುಂಡಿ, ಫುಟ್‌ಪಾತ್ ಮುಚ್ಚಿ, ರಸ್ತೆ ಬದಿ ನಿಂತಿರುವ ವಾಹನವನ್ನು ಕ್ಲಿಯರ್ ಮಾಡಿ ಎಂದು ಅಧಿಕಾರಿಗಳ ವಿರುದ್ಧ ಕೆಂಡಕಾರಿದ್ದಾರೆ.