ಆರ್‌ಟಿಐ ಕಾಯ್ದೆಯ ಕಲಂ 4ರ ನಿರ್ವಹಣೆ ಕುರಿತಂತೆ ನಾಲ್ವರು ಅರ್ಜಿದಾರರು ಬಿಡಿಎ ಉಪಕಾರ್ಯದರ್ಶಿ-1 ಉಮೇಶ್ ಅವರಿಗೆ ಪ್ರತ್ಯೇಕ ಅರ್ಜಿಗಳಲ್ಲಿ ಮಾಹಿತಿ ಕೋರಿದ್ದರು. ಆ ಅರ್ಜಿಗಳ ಕುರಿತಂತೆ ಯಾವುದೇ ಮಾಹಿತಿ ನೀಡದೇ, ಉಪಕಾರ್ಯದರ್ಶಿ ನಿರ್ಲಕ್ಷ್ಯ ತೋರಿದ್ದರು. ಈ ಬಗ್ಗೆ ಅರ್ಜಿದಾರರಾದ ತಕ್ಷಕ್, ತನ್ವಿತಾ ಗೌರ್, ಅಶ್ವಿಜಾ ಪಿ ಹಾಗೂ ಬಾಲಚಂದ್ರ ರಾವ್ ಎಂಬುವರು ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.