ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಛಲವಾದಿ, ಡಿಎಸ್ಎಸ್, ಇನ್ನಿತರ ದಲಿತಪರ ಸಂಟನೆಗಳ ಮುಖ್ಯಸ್ಥರ ಸಭೆಯ ಸಭೆಯ ಬಳಿಕ ಮಾತನಾಡಿದ ಮುಖಂಡ ಸುರೇಶ್, ಕಳೆದ 75 ವರ್ಷಗಳಿಂದ ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿಲ್ಲ. ರಾಜ್ಯದ ಒಟ್ಟು ಜನಸಂಖ್ಯೆಯ ಪೈಕಿ ಚಲವಾದಿ ಸಮುದಾಯದ 1.8 ಕೋಟಿ ಇದ್ದು, ಈ ಪೈಕಿ ಅಂದಾಜು ಒಂದು ಕೋಟಿ ಮಂದಿ ಹಿಂದಿನಿಂದಲೂ ಕಾಂಗ್ರೆಸ್ಗೆ ಮತ ಚಲಾಯಿಸುತ್ತಿದ್ದಾರೆ. ಆದರೂ ಪ್ರಮುಖ ಹುದ್ದೆ ನೀಡುವಾಗ ನಮ್ಮ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.