ದಲಿತರ ದೂರು&ದುಮ್ಮಾನ ಆಲಿಸಲು ನಿರ್ಲಕ್ಷ್ಯ Dalit

ದಲಿತರ ದೂರು&ದುಮ್ಮಾನ ಆಲಿಸಲು ನಿರ್ಲಕ್ಷ್ಯ Dalit
ದಲಿತರ ದೂರು&ದುಮ್ಮಾನ ಆಲಿಸಲು ನಿರ್ಲಕ್ಷ್ಯ Dalit
Published on
ಶ್ರೀನಿವಾಸಪುರ: ಪೊಲೀಸ್​ ಠಾಣೆ ವೃತ್ತದಲ್ಲಿ ಕಾಟಾಚಾರಕ್ಕೆ ದಲಿತರ ಕುಂದು& ಕೊರತೆ ಸಭೆ ಕರೆಯುತ್ತಿದ್ದಾರೆ. ಸರ್ಕಾರದ ನಿಯಮಗಳನ್ನು ಶ್ರೀನಿವಾಸಪುರ ಪೊಲೀಸರು ಗಾಳಿಗೆ ತೂರಲಾಗುತ್ತಿದೆ ಎಂದು ತಾಲೂಕು ದಲಿತ ಸಂಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.Dalit
ಪಟ್ಟಣದ ಪೊಲೀಸ್​ ಠಾಣಾ ವೃತ್ತದಲ್ಲಿ ಶನಿವಾರ ಕರೆದಿದ್ದ ದಲಿತರ ಕುಂದು ಕೊರತೆ ಸಭೆಗೆ ನಿಗದಿತ ಸಮಯಕ್ಕೆ ಪೊಲೀಸ್​ ವೃತ್ತ ನಿರೀಕರು, ಅಧಿಕಾರಿಗಳು ಬಂದಿಲ್ಲ. ಜತೆಗೆ ತಾಲೂಕಿನ ದಲಿತ ಸಂಟನೆಗಳ ಮುಖಂಡರಿಗೆ ಸಭೆಯ ಆಹ್ವಾನದ ಮಾಹಿತಿ ನೀಡಿಲ್ಲ ಎಂದು ಸಭೆ ಮುಂದೂಡುವಂತೆ ಒತ್ತಾಯಿಸಿ ಸಂಟನೆಗಳ ಮುಖಂಡರು ಹೊರ ನಡೆದರು.
ಈ ವೇಳೆ ಶಿಕ ಗಾಂಡ್ಲಹಳ್ಳಿ ಚಲಪತಿ ಮಾತನಾಡಿ, ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ದಲಿತ ಜಾಗೃತಿ, ಕುಂದು& ಕೊರತೆ ಸಭೆ ಕರೆಯಬೇಕು ಎಂದು ಸರ್ಕಾರದ ಸುತ್ತೋಲೆ ಇದ್ದರೂ ಪಟ್ಟಣದ ಪೊಲೀಸರು ಮಾಸಿಕ ಸಭೆಯನ್ನು ಸರಿಯಾಗಿ ಕರೆಯುತ್ತಿಲ್ಲ. ಸುಮಾರು 20 ದಿನಗಳಿಂದ ಕುಂದು& ಕೊರತೆ ಸಭೆ ಕರೆದು ನಾಮ್​ ಕೇ ವಾಸ್ತೆಗೆ ಫೋಟೋ ತೆಗೆದು ಮೇಲಧಿಕಾರಿಗಳಿಗೆ ಕಳುಹಿಸಿರುವ ಉದಾಹರಣೆ ಇದೆ. ಸಭೆಗೆ ದಲಿತ ಮುಖಂಡರು ಗೈರಾಗಿದ್ದರೂ ಸಭೆ ಯಶಸ್ವಿಯಾಗಿದೆ ಎಂದು ಸ್ಥಳಿಯ ಪೊಲೀಸರು ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.
ಸ್ಥಳಿಯ ಪೊಲೀಸ್​ ಠಾಣೆ ನಿರೀಕರು ಹಾಗೂ ಸಿಬ್ಬಂದಿ ಕಾರ್ಯವೈಖರಿ ಮೇಲೆ ಅಸಮಾಧಾನವಿದೆ. ಜಿಲ್ಲಾ ವರಿಷ್ಠಾಧಿಕಾರಿಗಳು ಅಥವಾ ಮುಳಬಾಗಿಲು ವೃತ್ತದ ಡಿವೈಎಸ್​ಪಿ ಮುಂದಿನ ಸಭೆಗೆ ಆಗಮಿಸಿ ತಾಲೂಕಿನ ದಲಿತರ ಕುಂದು& ಕೊರತೆ ಸಭೆ ನಡೆಸದೆ ಇದ್ದಲ್ಲಿ ಪೊಲೀಸ್​ ಠಾಣೆ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬುದ್ಧ ಸೇನೆಯ ಸಂಸ್ಥಾಪಕ ವರ್ತನಹಳ್ಳಿ ವೆಂಕಟೇಶ್​, ಎಂಆರ್​ಪಿಎಸ್​ ಜಿಲ್ಲಾಧ್ಯ ಕೃಷ್ಣಪ್ಪ. ಭೀಮವಾದ ತಾಲೂಕು ಸಂಚಾಲಕ ಮಟ್ಟಕನ್ನಸಂದ್ರ ನಾರಾಯಣಸ್ವಾಮಿ, ಶಿಕ ವೆಂಕಟಾಚಲಪತಿ, ವೆಂಕಟಸ್ವಾಮಿ, ನಾಗದೇನಹಳ್ಳಿ ವೆಂಕಟರಮಣ, ಕೂಸಂದ್ರ ರೆಡ್ಡಪ್ಪ, ಚಲಪತಿ, ಕಲ್ಲೂರು ವೆಂಕಟೇಶ್​, ನಾರಾಯಣಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net