ಮಾನಸಿಕ ಆರೋಗ್ಯ ಶಿಕ್ಷಣದಲ್ಲಿ ಜ್ಞಾನ, ಅಭ್ಯಾಸ ಮತ್ತು ನಾವೀನ್ಯತೆಗಳ ಅಗತ್ಯ -ಡಾ. ಜ್ಯೋತಿ ಪ್ರಕಾಶ್

‘Mental Health Education through Scientific Consultations’ (MECON) Conference
‘Mental Health Education through Scientific Consultations’ (MECON) Conference
Published on

ಪ್ರಮುಖ ಮುಖ್ಯಾಂಶಗಳು

  • * ವೈಜ್ಞಾನಿಕ ಸಮಾಲೋಚನೆಗಳ ಮೂಲಕ ಮಾನಸಿಕ ಆರೋಗ್ಯ ಶಿಕ್ಷಣ
ಬೆಂಗಳೂರು: ಮಾನಸಿಕ ಆರೋಗ್ಯ ಶಿಕ್ಷಣವು ಸಮಕಾಲೀನ ಸಮಸ್ಯೆಗಳಿಗೆ ಹಾಗೂ ಅವುಗಳನ್ನು ಪರಿಹರಿಸಲು ನವೀನ ತಂತ್ರಜ್ಞಾನಗಳ ಅಳವಡಿಕೆಗೆ ಒತ್ತು ನೀಡಬೇಕು ಎಂಬ ನಿರ್ಣಯವನ್ನು ‘ವೈಜ್ಞಾನಿಕ ಸಮಾಲೋಚನೆಗಳ ಮೂಲಕ ಮಾನಸಿಕ ಆರೋಗ್ಯ ಶಿಕ್ಷಣ’ (ಮೆಕಾನ್) ಸಮಾವೇಶದಲ್ಲಿ ಕೈಗೊಳ್ಳಲಾಯಿತು.
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) ಭಾನುವಾರ ನಡೆದ ಸಮಾವೇಶದಲ್ಲಿ ದೇಶದ ವಿವಿಧಡೆಯ ಮಾನಸಿಕ ಆರೋಗ್ಯ ಸಂಸ್ಥೆಯ ತಜ್ಞರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ರಿಗೇಡಿಯರ್ ಡಾ. ಜ್ಯೋತಿ ಪ್ರಕಾಶ್, ಮಾನಸಿಕ ಆರೋಗ್ಯ ಶಿಕ್ಷಣದಲ್ಲಿ ಜ್ಞಾನ, ಅಭ್ಯಾಸ ಮತ್ತು ನಾವೀನ್ಯತೆಗಳನ್ನು ಬೆಸೆಯುವುದು ಇಂದಿನ ಅಗತ್ಯವಾಗಿದೆ. ಇಲ್ಲದಿದ್ದಲ್ಲಿ ಶಿಕ್ಷಣ ಹಾಗೂ ಸಮಸ್ಯೆಗಳ ನಡುವೆ ಅಂತರ ಹೆಚ್ಚಲಿದೆ ಎಂದರು.
ಇದೇ ವೇಳೆ ನಿಮ್ಹಾನ್ಸ್ ಡಿಜಿಟಲ್ ಅಕಾಡೆಮಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಮೂರು ಆನ್‌ಲೈನ್ ಕೋರ್ಸ್, ಮಾಧ್ಯಮ ಮತ್ತು ಆರೋಗ್ಯ ವೃತ್ತಿಪರರಿಗಾಗಿ ‘ಮೀಡಿಯಾ ಆ್ಯಂಡ್ ಮೆಂಟಲ್ ಹೆಲ್ತ್’, ನ್ಯೂರಾಲಜಿ ಇಲಾಖೆಯ ಪೀಡಿಯಾಟ್ರಿಕ್ ನ್ಯೂರಾಲಜಿ ಘಟಕದೊಂದಿಗೆ ಅಭಿವೃದ್ಧಿಪಡಿಸಲಾದ ‘ಸೆರೆಬ್ರಲ್ ಪಾಲ್ಸಿ ಮತ್ತು ಇಂಟೆಲೆಕ್ಚುವಲ್ ಡೆವಲಪ್‌ಮೆಂಟಲ್ ಡಿಸೆಬಿಲಿಟಿ ಕುರಿಯ ಕೈಪಿಡಿಗಳು ಮತ್ತು ವೈಜ್ಞಾನಿಕ ಕಾರ್ಯಕ್ರಮ ಹಾಗೂ ಪ್ರಸ್ತುತಿಗಳ ಸಾರಾಂಶಗಳನ್ನು ಒಳಗೊಂಡಿರುವ ಮೆಕಾನ್- 2026 ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಸಂತೋಷ್ ಕುಮಾರ್ ಚತುರ್ವೇದಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net