

ಪ್ರಮುಖ ಮುಖ್ಯಾಂಶಗಳು
ದೇಶದಲ್ಲಿ ತೆಲಂಗಾಣ, ಕರ್ನಾಟಕ ಸೇರಿ ಏಳು ಜವಳಿ ಪಾರ್ಕ್ಗಳು ಏಕಕಾಲಕ್ಕೆ ಮಂಜೂರಾಗಿವೆ. ತೆಲಂಗಾಣದಲ್ಲಿ ಈಗಾಗಲೇ ಉತ್ಪಾದನೆ ಶುರುವಾಗಿದೆ. ಆದರೆ ಕಲಬುರಗಿ ಪಾರ್ಕ್ ಇನ್ನೂ ಆರಂಭದ ಹಂತದಲ್ಲಿದೆ. ತೊಗರಿ ಅಭಿವೃದ್ಧಿ ಮಂಡಳಿ ಬಲಪಡಿಸಬೇಕು, ರಿಂಗ್ ರಸ್ತೆ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
— > ಉಮಾಕಾಂತ ನಿಗ್ಗುಡಗಿ, ಮಾಜಿ ಅಧ್ಯಕ್ಷ, ಕೆಕೆಸಿಸಿಐ
ರಸ್ತೆ ಅಭಿವೃದ್ಧಿ, ಪಾರ್ಕಿಂಗ್, ಸಂಚಾರ ನಿರ್ವಹಣೆ, ಸರ್ಕಾರದ ಜಾಗ ಒತ್ತುವರಿ ಸೇರಿ ಎಲ್ಲ ಸಮಸ್ಯೆಗಳಿಗೂ ಹಂತ- ಹಂತವಾಗಿ ಪರಿಹಾರ ಒದಗಿಸಲಾಗುವುದು. 2-3 ದಿನಗಳಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಯೋಜನೆ ರೂಪಿಸಿ ಆದ್ಯತೆ ಆಧಾರದ ಮೇಲೆ ಕೆಲಸ ಕೈಗೆತ್ತಿಕೊಳ್ಳಲಾಗುವುದು.
— > ಇಕ್ರಮ್ ಶರೀಫ್, ಜಿಲ್ಲಾಧಿಕಾರಿ
ಪಾರ್ಕಿಂಗ್ ವ್ಯವಸ್ಥೆಗೆ ಈಗಾಗಲೇ ಜಾಗ ಗುರುತಿಸಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಕೆಕೆಆರ್ಡಿಬಿ 10 ಕೋಟಿ ರೂ. ಪಾಲಿಕೆಗೆ ಬಿಡುಗಡೆ ಮಾಡಿದೆ. ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣದ ಎದುರಿನ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಜಾಗ ಒತ್ತುವರಿಯಾಗಿದ್ದು, ತೆರವುಗೊಳಿಸಬೇಕು. ಸೂಪರ್ ಮಾರ್ಕೆಟ್, ಕಿರಾಣ ಬಜಾರ್, ಕಪಡಾ, ಚಪ್ಪಲ್, ಸರಾಫ್ ಬಜಾರ್ ಸೇರಿ ವಿವಿಧೆಡೆ ಬೀದಿ ವ್ಯಾಪಾರಿಗಳು ರಸ್ತೆಯಲ್ಲೇ ಬಂಡಿ ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು.
— > ಶರಣಬಸಪ್ಪ ಪಪ್ಪಾ, ಅಧ್ಯಕ್ಷ, ಕೆಕೆಸಿಸಿಐ