

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಸಮನ್ವಿತಸಂಸ್ಥೆಯ 15ನೇವಾರ್ಷಿಕೋತ್ಸವದ ಅಂಗವಾಗಿವಿದ್ಯಾರ್ಥಿ ಯುವಜನರಿಗೆ ನವಪಲ್ಲವಎಂಬ 15 ದಿನಗಳಕಲೆ- ಸಂಸ್ಕೃತಿಮತ್ತು ಕೌಶಲ್ಯ ತರಬೇತಿ ಕಾರ್ಯಾಗಾರವನ್ನುಆಯೋಜಿಸಲಾಗಿದೆ.
ಅರಕೆರೆಮೈಕೋ ಲೇಔಟ್‌ನಲ್ಲಿರುವ ಸಂಸ್ಥೆಯಆವರಣದಲ್ಲಿ ಏ.15ರಿಂದ 30ರವರೆಗೆಬೆಳಗ್ಗೆ 10ರಿಂದಸಂಜೆ 4ರವರೆಗೆಶಿಬಿರ ನಡೆಯಲಿದ್ದು,10ರಿಂದ 16ವರ್ಷವಯಸ್ಸಿನ ಮಕ್ಕಳು ಶಿಬಿರದಲ್ಲಿಪಾಲ್ಗೊಳ್ಳಬಹುದು.ಮೊದಲೇ ಹೆಸರನ್ನುನೋಂದಾಯಿಸಿ ಪ್ರವೇಶವನ್ನುಪಡೆಯಬಹುದಾಗಿರುತ್ತದೆ.
ಶಿಬಿರದಲ್ಲಿವಿವಿಧ ಕ್ಷೇತ್ರಗಳ ತಜ್ಞರುಭಾಗವಹಿಸಿ ಶಿಬಿರಾರ್ಥಿಗಳಿಗೆವ್ಯಾಯಾಮ, ಯೋಗ,ಧ್ಯಾನ,ಪ್ರಾರ್ಥನೆ,ಗೀತಗಾಯನ,ಚಿತ್ರಕಲೆ,ಕ್ರಾಫ್ಟ್,ಪ್ರಾಣಿ-ಪಕ್ಷಿಗಳಅರಿವು, ಪರಿಸರ,ನೃತ್ಯ,ಪುಸ್ತಕ ವಾಚನ,ಸಾಮರಸ್ಯ,ಮೌಲ್ಯ ಶಿಕ್ಷಣ,ನಾಟಕ,ಸಂವಹನ ಕಲೆಸೇರಿದಂತೆ ವಿವಿಧ ಕೌಶಲ ತರಬೇತಿಯನ್ನುನೀಡಲಿದ್ದಾರೆ.ಅಗತ್ಯ ಸಾಮಗ್ರಿಗಳನ್ನುಸಂಸ್ಥೆಯಿಂದ ಒದಗಿಸಲಾಗುವುದು.ವನ ಚಾರಣ,ಪ್ರಾಣಿ ಪಕ್ಷಿಗಳಅರಿವು, ವಿಜ್ಞಾನಮತ್ತು ಗಣಿತದ ಅರಿವು ಸೇರಿದಂತೆವಿನೂತನ ಪರಿಕಲ್ಪನೆಯೊಂದಿಗೆಮಕ್ಕಳು ರಜೆಯ ದಿನಗಳನ್ನುಕಲಿಕೆಯೊಂದಿಗೆ ಆನಂದಿಸಲು ಇದೊಂದುಉತ್ತಮ ವೇದಿಕೆಯಾಗಲಿದೆ.ಹೆಚ್ಚಿನವಿವರಗಳಿಗಾಗಿ 9844192952ಗೆ ಸಂಪರ್ಕಿಸಬಹುದು.