

ಪ್ರಮುಖ ಮುಖ್ಯಾಂಶಗಳು
ಯಶವಂತಪುರ: ಗಿಡಮರಗಳಿಂದಕೂಡಿರುವ ಪ್ರಕೃತಿಯನ್ನು ದೇವರಂತೆಕಾಣುವ ಮೂಲಕ ಪ್ರತಿಯೊಬ್ಬರುಒಂದೊಂದು ಗಿಡವನ್ನು ಬೆಳೆಸುವಮೂಲಕ ಪರಿಸರವನ್ನು ಉಳಿಸುವ ಕೆಲಸಮಾಡಬೇಕು ಎಂದು ಯಶವಂತಪುರ ವಿಧಾನಸಭಾಕ್ಷೇತ್ರದ ಮಂಡಲ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎನ್.ಸಿ.ಕುಮಾರ್ ಕರೆನೀಡಿದ್ದಾರೆ.
ನಾಗದೇವನಹಳ್ಳಿಯಲ್ಲಿಬಿಜೆಪಿ ರೈತ ಮೋರ್ಚಾ ವತಿಯಿಂದಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿನೂತನ ಪದಾಧಿಕಾರಿಗಳಿಗೆ ನೇಮಕಾತಿಪತ್ರ ವಿತರಣೆ.ಸಾವಿರ ಬಿಜೆಪಿಕಾರ್ಯಕರ್ತರಿಗೆ ಅವರ ತಾಯಿಯಹೆಸರಿನಲ್ಲಿ ಒಂದೊಂದು ಗಿಡವನ್ನುಬೆಳೆಸಲು ಅಡಿಕೆ ಸಸಿಗಳನ್ನುವಿತರಣೆ ಮಾಡಿ ಮಾತನಾಡಿದರು.ಮುಂದಿನ ದಿನಗಳಲ್ಲಿ12000 ಮನೆಗಳಮುಂದೆ ಒಂದು ಗಿಡವನ್ನು ಬೆಳೆಸಲುಎಲ್ಲರಿಗೂ ಉಚಿತವಾಗಿ ಗಿಡನೀಡುವುದಾಗಿ ಕುಮಾರ್ ತಿಳಿಸಿದರು.
ಬೆಂಗಳೂರುಉತ್ತರ ಜಿಲ್ಲಾ ರೈತ ಮೋರ್ಚಾಅಧ್ಯಕ್ಷ ಜಿ.ಜೆ.ಮೂರ್ತಿ ಮಾತನಾಡಿಭಾರತ ಕೃಷಿ ಪ್ರಧಾನ ದೇಶವಾಗಿದ್ದು,ನರೇಂದ್ರ ಮೋದಿಯವರುರೈತರ ಕೃಷಿಗೆ ಹಲವಾರು ಯೋಜನೆಗಳನ್ನುಜಾರಿಗೆ ತಂದಿದ್ದಾರೆ.ಕಾರ್ಯಕರ್ತರುರೈತರ ಮನೆ ಬಾಗಿಲಿಗೆ ಅವುಗಳನ್ನುತಲುಪಿಸುವ ಕೆಲಸ ಮಾಡಬೇಕು ಎಂದರು.
ಯಶವಂತಪುರಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷಸಿ.ಎಂ.ಮಾರೇಗೌಡ ಮಾತನಾಡಿರೈತರಿಂದ ಮಾತ್ರ ದೇಶ ಅಭಿವೃದ್ಧಿಯಾಗಲಿದ್ದು,ರೈತರೇ ದೇಶದಬೆನ್ನೆಲುಬು ಎಂದರು.
ಕಾರ್ಯಕ್ರಮದಲ್ಲಿನಗರ ಮಂಡಲ ಅಧ್ಯಕ್ಷ ಜಯರಾಮೇಗೌಡ,ಮುಖಂಡರಾದರ.ಅಂಜನಪ್ಪ,ಗಿರಿಯಪ್ಪ,ಆರ್.ಸತ್ಯನಾರಾಯಣ,ರಾಜು ನಾಯಕ್,ಮೈಲಸಂದ್ರಮುನಿಸ್ವಾಮಿ,ತೇಜಸ್ವಿನಿಗೌಡ, ತಾರಾ,ಪೂರ್ಣಿಮಾಮತ್ತಿತರರು ಪಾಲ್ಗೊಂಡಿದ್ದರು.