ಜುಲೈ 11 ರಂದು ರಾಷ್ಟ್ರೀಯ ಲೋಕ ಅದಾಲತ್​

,
,
Published on
ಯಾದಗಿರಿ: ಜಿಲ್ಲೆಯಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಂಟಿಯಾಗಿ ಜು. 11ರಂದು ರಾಷ್ಟ್ರೀಯ ಲೋಕ ಅದಾಲತ್​ ಆಯೋಜಿಸಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್​.ಜೆ. ಮರುಳಸಿದ್ದಾರಾಧ್ಯ ತಿಳಿಸಿದ್ದಾರೆ. ಮಂಗಳವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಾತನಾಡಿದ ಅವರು, ವಿವಿಧ ನ್ಯಾಯಾಲಯಗಳಲ್ಲಿ 19,579 ಪ್ರಕರಣಗಳು ಬಾಕಿ ಉಳಿದಿದ್ದು, ಅವುಗಳಲ್ಲಿ 1,113 ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ನಿಗದಿತ ದಿನಾಂಕದಂದು ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಈ ದಿನಾಂಕದವರೆಗೆ ಸಂಖ್ಯೆಗಳು ಹೆಚ್ಚಾಗಬಹುದು ಎಂದು ಅವರು ತಿಳಿಸಿದರು. ಅಂತಹ ಗುರುತಿಸಲಾದ ಪ್ರಕರಣಗಳ ಕದಾರರು ಮತ್ತು ದಾವೆ ಹೂಡುವವರನ್ನು ಪ್ರತಿನಿಧಿಸುವ ವಕೀಲರು, ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಲೋಕ ಅದಾಲತ್​ನಲ್ಲಿ ಭಾಗವಹಿಸಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಹಿರಿಯ ಸಿವಿಲ್​ ನ್ಯಾಯಾಧೀಶರೂ ಆದ ಡಿಎಲ್​ಎಸ್​ಎ ಸದಸ್ಯ ಕಾರ್ಯದರ್ಶಿ ಮರಿಯಪ್ಪ, ಆರ್​ಟಿಒ ಮಿಲಿಂದಕುಮಾರ ಇತರರಿದ್ದರು.
18 ಪ್ರಕರಣಗಳನ್ನು ಇತ್ಯರ್ಥಕ್ಕೆ ನಿರ್ದೇಶನ
ಭಾರತದ ಸವೋರ್ಚ್ಚ ನ್ಯಾಯಾಲಯದಲ್ಲಿ ಯಾದಗಿರಿ ಜಿಲ್ಲೆಗೆ ಸಂಬಂಧಿಸಿದಂತೆ ಬಾಕಿ ಇರುವ 18 ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು  ನಮಗೆ ನಿರ್ದೇಶನ ನೀಡಲಾಗಿದೆ. ಅಂತಹ ಪ್ರಕರಣಗಳನ್ನು ಜುಲೈ 21, 22 ಮತ್ತು 23 ರಂದು ವಿಶೇಷ ವಿಚಾರಣೆಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದ ಮರುಳಸಿದ್ದಾರಾಧ್ಯ, ಆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್​ನ ಮುಂದೆ ಇರುವ ಕದಾರರಿಗೆ ನಿಗದಿತ ದಿನಾಂಕದ ಬಗ್ಗೆ ಈಗಾಗಲೇ ತಿಳಿಸಲಾಗಿದೆ ಎಂದು ಹೇಳಿದರು.
ದಂಡ ಸಂಗ್ರಹಿಸುವ ಅಭಿಯಾನ
ಯಾದಗಿರಿ: ಜಿಲ್ಲಾ ಪೋಲಿಸ್​ ವರಿಷ್ಠಾಧಿಕಾರಿ ಪೃಥ್ವಿಕ್​ ಶಂಕರ್​ ಮಾತನಾಡಿ, ಜೂ.21 ರಿಂದ ಜು.10ರವರೆಗೆ ಸಂಚಾರಿ ನಿಯಮ ಉಲ್ಲಂನೆಗೆ ಸಂಬಂಧಿಸಿದ ಇ&ಚಲನಲ್ಲಿ ಪ್ರಕರಣಗಳು ದಾಖಲಾಗಿರುವ ವ್ಯಕ್ತಿಗಳಿಂದ ದಂಡವನ್ನು ರ್ದಿಷ್ಟವಾಗಿ ಗುರುತಿಸಲಾದ ಸ್ಥಳಗಳಲ್ಲಿ ಮೊದಲು ಪಾವತಿಸಲು ಪೊಲೀಸ್​ ಇಲಾಖೆ ಅವಕಾಶ ಕಲ್ಪಿಸಿದೆ. ನಿಗದಿತ ಅವಧಿಯಲ್ಲಿ ದಂಡ ಪಾವತಿಸಿದರೆ, ಇಲಾಖೆಯು ನಿಜವಾದ ದಂಡದ ಮೊತ್ತದ ಮೇಲೆ ಶೇ.50 ರಿಯಾಯಿತಿ ನೀಡುತ್ತದೆ ಎಂದು ಅವರು ಹೇಳಿದರು. ಸಂಚಾರ ನಿಯಮ ಉಲ್ಲಂನೆಗಾಗಿ 2025ರ ಅ.1ರಿಂದ 2026ರ ಮೇ 31ರವರೆಗೆ 12,119 ಇ&ಚಲನ್​ಗಳನ್ನು ನೋಂದಾಯಿಸಲಾಗಿದೆ.67, 91,900 ರೂ.ದಂಡ ವಿಧಿಸಲಾಗಿದೆ, ಅದರಲ್ಲಿ 6,40,200 ರೂ.ದಂಡ ಸಂಗ್ರಹಿಸಲಾಗಿದೆ ಮತ್ತು 61,51,700 ದಂಡ ವಸೂಲಾತಿ ಬಾಕಿ ಇದೆ. ಆದ್ದರಿಂದ ಶೇ.50 ರಿಯಾಯಿತಿ ನೀಡುವ ಮೂಲಕ ಉಳಿದ ದಂಡ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net