ಮಾದಕ ಪದಾರ್ಥ ದೇಹಕ್ಕೆ ಅಪಾಯಕಾರಿ

ಬೆಳಗಾವಿ: ತಂಬಾಕು ಸೇವನೆ ದೇಹ ಮತ್ತು ಮನಸ್ಸಿಗೆ ಅಪಾಯಕಾರಿಯಾಗಿದೆ ಎಂದು ಕೆಎಲ್​ಇ ಶತಮಾನೋತ್ಸವ ಚಾರಿಟಬಲ್​ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ.ಸಂಜಯ  ಕಂಬಾರ ಹೇಳಿದರು.  ನಗರದ ಕೆಎಲ್​ಇ ಶತಮಾನೋತ್ಸವ ಚಾರಿಟಬಲ್​ ಆಸ್ಪತ್ರೆ, ಕೆಎಲ್​ಇ ಸೆಂಟಿನರಿ ಇನ್​ಸ್ಟಿಟ್ಯೂಟ್​ ಆಫ್​ ನರ್ಸಿಂಗ್​ ಸೈನ್ಸ್​ ಸಹಯೋಗದಲ್ಲಿ ಬುಧವಾರ ವಿಶ್ವ ತಂಬಾಕುರಹಿತ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಗೃತಿ ರ್ಯಾಲಿ ಉದ್ಘಾಟಿಸಿ ಅವರು  ಮಾತನಾಡಿದರು.   ತಂಬಾಕು ಸೇವನೆ ವಿಶ್ವದಾದ್ಯಂತ ಲಾಂತರ ಜನರ ಆರೋಗ್ಯ ಹಾಳುಮಾಡುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಧೂಮಪಾನ, ಗುಟ್ಕಾ, ಪಾನ್​ ಮಸಾಲಾ ಹಾಗೂ ಇತರ ತಂಬಾಕು ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್​, ಹೃದಯ, ಶ್ವಾಸಕೋಶ ಕಾಯಿಲೆಗಳು ಸೇರಿದಂತೆ ಅನೇಕ ಜೀವಘಾತಕ ರೋಗಗಳು ಉಂಟಾಗುತ್ತವೆ ಎಂದರು.  ಕೆಎಲ್​ಇ ಸೆಂಟಿನರಿ ಇನ್​ಸ್ಟಿಟ್ಯೂಟ್​ ಆಫ್​ ನರ್ಸಿಂಗ್​ ಸೈನ್ಸ್​ ಕಾಲೇಜಿನ ಪ್ರಾಂಶುಪಾಲ ಡಾ.ವಿಕ್ರಾಂತ ನೇಸರಿ ಮಾತನಾಡಿ, ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಎಲ್ಲರ ಪಾತ್ರ ಅಗತ್ಯವಾಗಿದೆ ಎಂದರು. ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನವೀನ ಎನ್​. ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಯುವಜನರು ತಂಬಾಕು ಹಾಗೂ ಇತರ ವ್ಯಸನಕಾರಿ ಪದಾರ್ಥಗಳಿಂದ ದೂರವಿರಬೇಕು ಎಂದರು.  ರಾಜು ಭಾತಖಂಡೆ, ಗಿರೀಶ ದೊಂಗಡಿ ಇತರರಿದ್ದರು.

Published on
ಬೆಳಗಾವಿ: ತಂಬಾಕು ಸೇವನೆ ದೇಹ ಮತ್ತು ಮನಸ್ಸಿಗೆ ಅಪಾಯಕಾರಿಯಾಗಿದೆ ಎಂದು ಕೆಎಲ್​ಇ ಶತಮಾನೋತ್ಸವ ಚಾರಿಟಬಲ್​ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ.ಸಂಜಯ
ಕಂಬಾರ ಹೇಳಿದರು.
ನಗರದ ಕೆಎಲ್​ಇ ಶತಮಾನೋತ್ಸವ ಚಾರಿಟಬಲ್​ ಆಸ್ಪತ್ರೆ, ಕೆಎಲ್​ಇ ಸೆಂಟಿನರಿ ಇನ್​ಸ್ಟಿಟ್ಯೂಟ್​ ಆಫ್​ ನರ್ಸಿಂಗ್​ ಸೈನ್ಸ್​ ಸಹಯೋಗದಲ್ಲಿ ಬುಧವಾರ ವಿಶ್ವ ತಂಬಾಕುರಹಿತ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಗೃತಿ ರ್ಯಾಲಿ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ಸೇವನೆ ವಿಶ್ವದಾದ್ಯಂತ ಲಾಂತರ ಜನರ ಆರೋಗ್ಯ ಹಾಳುಮಾಡುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಧೂಮಪಾನ, ಗುಟ್ಕಾ, ಪಾನ್​ ಮಸಾಲಾ ಹಾಗೂ ಇತರ ತಂಬಾಕು ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್​, ಹೃದಯ, ಶ್ವಾಸಕೋಶ ಕಾಯಿಲೆಗಳು ಸೇರಿದಂತೆ ಅನೇಕ ಜೀವಘಾತಕ ರೋಗಗಳು ಉಂಟಾಗುತ್ತವೆ ಎಂದರು.
ಕೆಎಲ್​ಇ ಸೆಂಟಿನರಿ ಇನ್​ಸ್ಟಿಟ್ಯೂಟ್​ ಆಫ್​ ನರ್ಸಿಂಗ್​ ಸೈನ್ಸ್​ ಕಾಲೇಜಿನ ಪ್ರಾಂಶುಪಾಲ ಡಾ.ವಿಕ್ರಾಂತ ನೇಸರಿ ಮಾತನಾಡಿ, ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಎಲ್ಲರ ಪಾತ್ರ ಅಗತ್ಯವಾಗಿದೆ ಎಂದರು.
ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನವೀನ ಎನ್​. ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಯುವಜನರು ತಂಬಾಕು ಹಾಗೂ ಇತರ ವ್ಯಸನಕಾರಿ ಪದಾರ್ಥಗಳಿಂದ ದೂರವಿರಬೇಕು ಎಂದರು.
ರಾಜು ಭಾತಖಂಡೆ, ಗಿರೀಶ ದೊಂಗಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net