ಹೆದ್ದಾರಿಯಲ್ಲಿ ನಂದಿನಿ ಟ್ಯಾಂಕರ್ ಪಲ್ಟಿ; ಬಾಟಲಿ, ಕ್ಯಾನ್, ಹಿಡಿದು ಓಡಿಬಂದ ಜನ | Nandini tanker overturns
ಶಿರಾ ಬೈಪಾಸ್‌ನಲ್ಲಿ ನಂದಿನಿ ಹಾಲಿನ ಟ್ಯಾಂಕರ್ ಪಲ್ಟಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಿರಾ ಬೈಪಾಸ್‌ನಲ್ಲಿ ನಂದಿನಿ ಹಾಲಿನ ಟ್ಯಾಂಕರ್ ಪಲ್ಟಿ
ಸುಮಾರು 8 ಲಕ್ಷ ರೂ. ಮೌಲ್ಯದ 21 ಸಾವಿರ ಲೀಟರ್ ಹಾಲು
ಬಾಟಲಿ, ಕ್ಯಾನ್, ಪಾತ್ರೆ ಹಿಡಿದು ಹಾಲಿಗಾಗಿ ಮುಗಿಬಿದ್ದ ಜನ
ತುಮಕೂರು: ರಸ್ತೆಯಲ್ಲಿ ನೀರು ಹರಿದಿದ್ದನ್ನ ನೋಡಿರ್ತೀವಿ. ಆದ್ರೆ, ಇಲ್ಲಿ ಹೆದ್ದಾರಿಯಲ್ಲೇ ಹಾಲಿನ ಹೊಳೆಯೇ ಹರಿದಿದೆ. ನಂದಿನಿ ಹಾಲಿನ ಟ್ಯಾಂಕರ್ ಪಲ್ಟಿಯಾಗಿ, ಅದರಲ್ಲಿದ್ದ ಸಾವಿರಾರು ಲೀಟರ್ ಹಾಲು ರಸ್ತೆಯುದ್ದಕ್ಕೂ ಹರಿದ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುಮಕೂರು ಜಿಲ್ಲೆಯ ಶಿರಾ ರಾಷ್ಟ್ರೀಯ ಹೆದ್ದಾರಿ-48ರ ಗುಮ್ಮನಹಳ್ಳಿ ಸಮೀಪ ಈ ಅಪಘಾತ ಸಂಭವಿಸಿದೆ. ಸುಮಾರು 8 ಲಕ್ಷ ರೂ. ಮೌಲ್ಯದ 21 ಸಾವಿರ ಲೀಟರ್ ಹಾಲನ್ನು ತುಂಬಿಕೊಂಡು ತುಮಕೂರಿನಿಂದ ಮುಂಬೈಗೆ ತೆರಳುತ್ತಿದ್ದ ಕೆಎಂಎಫ್‌ನ ನಂದಿನಿ ಹಾಲಿನ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ.
ಬಾಟಲಿ, ಪಾತ್ರೆ, ಕ್ಯಾನ್ ಹಿಡಿದು ಬಂದ ಜನ
ಟ್ಯಾಂಕರ್ ಪಲ್ಟಿಯಾಗಿ ಅದರಲ್ಲಿದ್ದ ಹಾಲು ರಸ್ತೆಗೆ ಹರಿದು ಹೆದ್ದಾರಿಯೇ ಹಾಲಿನ ಹೊಳೆಯಂತಾಗಿದೆ. ಇದನ್ನ ನೋಡುತ್ತಿದ್ದಂತೆ ಸ್ಥಳೀಯರು ಕೂಡಲೇ ಪ್ಲಾಸ್ಟಿಕ್ ಬಾಟಲಿ, ಪಾತ್ರೆ, ಕ್ಯಾನ್‌ಗಳನ್ನು ಹಿಡಿದುಕೊಂಡು ಸ್ಥಳಕ್ಕೆ ಓಡಿದ್ದಾರೆ. ಸಿಕ್ಕಷ್ಟು ಹಾಲನ್ನು ಸಂಗ್ರಹಿಸಿಕೊಳ್ಳಲು ಜನ ಮುಗಿಬಿದ್ದರು.
ಕೆಲಕಾಲ ಟ್ರಾಫಿಕ್ ಜಾಮ್
ಅದೃಷ್ಟವಶಾತ್ ಘಟನೆಯಲ್ಲಿ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಹಾಲು ರಸ್ತೆಗೆ ಚೆಲ್ಲಿದ್ದರಿಂದ ಹಾಗೂ ಜನರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಕ್ರೇನ್ ತರಿಸಿ ಪಲ್ಟಿಯಾಗಿದ್ದ ಹಾಲಿನ ಟ್ಯಾಂಕರ್‌ನ್ನು ರಸ್ತೆಯಿಂದ ತೆರವು ಮಾಡಲಾಯಿತು.
ಇನ್ನು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ‘ಪುಗಸಟ್ಟೆ ಸಿಕ್ಕರೆ ಜನ ಹೇಗೆ ಮುಗಿಬೀಳುತ್ತಾರೆ ನೋಡಿ’ ಎಂದು ನಟ್ಟಿಗರು ಕಾಮೇಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸುಮ್ಮನೆ ಹಾಲು ಮಣ್ಣುಪಾಲಾಗುವ ಬದಲು ಜನ ಕೊಂಡೊಯ್ದು ಕುಡಿದರೆ ಏನು ತಪ್ಪು ಎಂದು ಪ್ರತಿಕ್ರಯಿಸಿದ್ದಾರೆ.