

ಪ್ರಮುಖ ಮುಖ್ಯಾಂಶಗಳು
ಜಯದೇವ ಸಂಸ್ಥೆಯಲ್ಲಿ ಉತ್ತಮ ಸೌಲಭ್ಯಗಳನ್ನು ಪರಿಗಣಿಸಿ ದಿನದಿಂದ ದಿನಕ್ಕೆ ಆಸ್ಪತ್ರೆಗೆ ಬರುವ ಹೃದ್ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಷ್ಟೇ ಒತ್ತಡವಾದರೂ ಎಲ್ಲರಿಗೂ ಕಡಿಮೆ ಮತ್ತು ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಅವಶ್ಯಕತೆ ಇರುವವರಿಗೆ ಸಾಮಾನ್ಯ ವಾರ್ಡ್ ಜತೆಗೆ ಸ್ಪೆಷಲ್ ವಾರ್ಡ್, ಡೀಲಕ್ಸ್ ವಾರ್ಡ್ ವ್ಯವಸ್ಥೆ ಇದ್ದು, ರೋಗಿಗಳು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಿತ್ಯ 1,800ಕ್ಕೂ ಅಧಿಕ ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ.