ಇಪ್ಪತ್ಮೂರು ವಾರ್ಡ್‌ಗಳ ನಿವಾಸಿಗಳಿಗೆ ಕುಡಿವ ನೀರು ಪೂರೈಸುವ ಶಾಶ್ವತ ಕುಡಿವ ನೀರಿನ ಎರಡೂ ಕೆರೆಗಳಲ್ಲಿ ಜಲ ಪ್ರಮಾಣ ಇಳಿಮುಖವಾಗಿ ಜನರು ಪರದಾಡುವ ಪರಿಸ್ಥಿತಿ ಬಂದೊದಗಿದೆ. ಕುಡಿವ ನೀರಿಗಾಗಿ 28 ಅಡಿ ಸಾಮರ್ಥ್ಯದ ಒಂದು ಕೆರೆ, 10 ಅಡಿ ಸಾಮರ್ಥ್ಯದ ಮತ್ತೊಂದು ಕೆರೆ ನಿರ್ಮಿಸಲಾಗಿದೆ. ಎರಡು ಕೆರೆಗಳಿದ್ದರೂ ಸಮಸ್ಯೆ ಮಾತ್ರ ತಪ್ಪಿಲ್ಲ. ಈ ನಡುವೆ ಬೋರ್‌ವೆಲ್‌ಗಳು ಬಹುತೇಕ ಬತ್ತಿದ್ದು, ಇನ್ನಷ್ಟು ಸಂಕಷ್ಟಕ್ಕೀಡುಮಾಡಿದೆ.