ರಂಜಿತ್ನ ಅಕ್ಕ ಪವಿತ್ರಾ ಅವರನ್ನು ಶ್ರೀನಿವಾಸ್ಗೆ ಕೊಟ್ಟು ಮದುವೆ ಮಾಡಿದ್ದು, ಶ್ರೀನಿವಾಸ್ ಸಹೋದರಿ ಕೋಮಲಾ ಜತೆಗೆ ರಂಜಿತ್ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಆದರೆ, ಕೋಮಲಾಳನ್ನು ಬೇರೊಬ್ಬರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ, ಗಂಡನನ್ನು ಬಿಟ್ಟು ರಂಜಿತ್ ಜತೆಗೆ ಕೋಮಲಾ ಪರಾರಿಯಾಗಿದ್ದಳು. ಈ ವಿಚಾರಕ್ಕೆ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಹಲವು ಬಾರಿ ರಾಜಿ ಕೂಡ ಆಗಿತ್ತು ಎನ್ನಲಾಗಿದೆ.