ಶ್ರೀನಿವಾಸಪುರ: ಪಟ್ಟಣದ ರಾಮಕೃಷ್ಣ ಬಡಾವಣೆಯ ಶೈಲೇಂದ್ರ ಶಾಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಮ್ಯಾನ್ಹೊಲ್ ಗುಣಿ ಬಿದ್ದಿದ್ದನ್ನು ಪುರಸಭೆ ಅಧಿಕಾರಿಗಳು ಸರಿಪಡಿಸಿದ್ದಾರೆ.
ಮ್ಯಾನ್ಹೋಲ್ ಕ್ಯಾಪ್ ಮುರಿದು ಅಪಾಯಕ್ಕೆ ಆಹ್ವಾನಿಸುವಂತಿದ್ದರಿಂದ ವಿಜಯವಾಣಿಯಲ್ಲಿ "ಮ್ಯಾನ್ಹೋಲ್ ದುರಸ್ತಿಗೆ ಆಗ್ರಹ' ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿಗೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಗುಣಿ ಸರಿಪಡಿಸಿದ್ದಾರೆ.
ಪತ್ರಿಕೆಯಲ್ಲಿ ಪ್ರಕಟವಾಗುವ ಮುಂಚೆ ಈ ಸಮಸ್ಯೆ ಬಗ್ಗೆ ಸ್ಥಳಿಯ ನಿವಾಸಿಗಳಾದ ಸೌಮ್ಯಾ ಮತ್ತು ಕಾಂಗ್ರೆಸ್ ಮುಖಂಡ ಮಂಜುನಾಥ್ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಗಮನ ಹರಿಸಿರಲಿಲ್ಲ ಎಂದು ಪುರಸಭೆ ಅಧಿಕಾರಿಗಳ ಮೇಲೆ ಬೇಸರ ವ್ಯಕ್ತಪಡಿಸಿ ಆರೋಪ ಮಾಡಿದ್ದರು.