ಮುಳಸಾವಳಗಿ ತೆರಿಗೆ ಹಣ ದುರ್ಬಳಕೆ ಆರೋಪ

ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮ ಪಂಚಾಯಿತಿಯಲ್ಲಿ ಅನುದಾನ ದುರುಪಯೋಗವಾಗಿದೆ ಎಂದು ಆಗ್ರಹಿಸಿ ಸದಸ್ಯರು ಹಾಗೂ ದಸಂಸ ಪದಾಧಿಕಾರಿಗಳು ಇಒ ಭಾರತಿ ಚಲುವಯ್ಯಗೆ ಮನವಿ ಸಲ್ಲಿಸಿದರು. ರಾಜು ರಾಠೋಡ, ಬೀರು ಹಳ್ಳಿ, ಪರಶುರಾಮ ನಾಯ್ಕೋಡಿ, ಪ್ರಕಾಶ ಗುಡಿಮನಿ, ರಾಜು ಸಿಂದಗೇರಿ, ಯಮನಪ್ಪ ಬೂತಾಳಿ ಇತರರಿದ್ದರು.
ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮ ಪಂಚಾಯಿತಿಯಲ್ಲಿ ಅನುದಾನ ದುರುಪಯೋಗವಾಗಿದೆ ಎಂದು ಆಗ್ರಹಿಸಿ ಸದಸ್ಯರು ಹಾಗೂ ದಸಂಸ ಪದಾಧಿಕಾರಿಗಳು ಇಒ ಭಾರತಿ ಚಲುವಯ್ಯಗೆ ಮನವಿ ಸಲ್ಲಿಸಿದರು. ರಾಜು ರಾಠೋಡ, ಬೀರು ಹಳ್ಳಿ, ಪರಶುರಾಮ ನಾಯ್ಕೋಡಿ, ಪ್ರಕಾಶ ಗುಡಿಮನಿ, ರಾಜು ಸಿಂದಗೇರಿ, ಯಮನಪ್ಪ ಬೂತಾಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಭಾರತಿ ಚಲುವಯ್ಯಗೆ ಮನವಿ
  • ವಾರದೊಳಗಾಗಿ ಲೆಕ್ಕಪತ್ರ ನೀಡಲು ಒತ್ತಾಯ
ದೇವರಹಿಪ್ಪರಗಿ : ಮುಳಸಾವಳಗಿ ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ತೆರಿಗೆ ಸಂಗ್ರಹ ಮಾಡಿದರೂ ಯಾವೊಂದು ಅಭಿವೃದ್ಧಿ ಕಾರ್ಯ ಮಾಡದೆ ದುರ್ಬಳಕೆಯಾಗಿದ್ದು, ವಾರದೊಳಗಾಗಿ ಲೆಕ್ಕಪತ್ರ ನೀಡಬೇಕೆಂದು ತಾಪಂ ಇಒ ಭಾರತಿ ಚಲುವಯ್ಯ ಅವರಿಗೆ ಗ್ರಾಪಂ ಸದಸ್ಯರು ಹಾಗೂ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಪದಾಧಿಕಾರಿಗಳು, ಎನ್‌ಆರ್‌ಇಜಿ ಯೋಜನೆ, 15ನೇ ಹಣಕಾಸು, ವರ್ಗ-1ರ ಅನುದಾನ, ನೀರು ನಿರ್ವಹಣೆ, ಕರೆಂಟ್ ಬಿಲ್‌ನಿಂದ ಬಂದ ಅನುದಾನ, ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಭತ್ಯೆ, ದೊಡ್ಡ ಪ್ರಮಾಣದ ಕಲ್ಲು ಗಣಿಗಾರಿಕೆಯಿಂದ ಬಂದ ತೆರಿಗೆ ಹಣ, ಪಡಗಾನೂರ ಗ್ರಾಮದ ವ್ಯಾಪ್ತಿಯಲ್ಲಿನ ವಿಂಡ್ ಪವರ್‌ಯಿಂದ ಬಂದ ತೆರಿಗೆ ಹಣದಲ್ಲಿ ದುರ್ಬಳಕೆಯಾಗಿದೆ. ಸಾಕಷ್ಟು ಬಾರಿ ಸಂಬಂಧಿಸಿದ ಪಿಡಿಒ ಅವರಿಗೆ ತಿಳಿಸಿದರೂ ಕೇವಲ ಹಾರಿಕೆ ಉತ್ತರ ಮಾತ್ರ ನೀಡುತ್ತಿದ್ದಾರೆ.
2023ರಿಂದ 2026ರವರೆಗೆ ಸಂಪೂರ್ಣ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚನೆ ಮಾಡಿ, ತನಿಖೆ ಮಾಡಿ, ವರದಿ ನೀಡಬೇಕು. ಎಸ್‌ಸಿ, ಎಸ್‌ಟಿ ಅನುದಾನ ಸಮರ್ಪಕವಾಗಿ ಬಳಸಿಲ್ಲ. ಒಂದು ವಾರದೊಳಗೆ ಸಮರ್ಪಕವಾಗಿ ಉತ್ತರಿಸದಿದ್ದರೆ ತಾ.ಪಂ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾ.ಪಂ ಸದಸ್ಯರಾದ ರಾಜು ರಾಠೋಡ, ಬೀರು ಹಳ್ಳಿ, ಪರಶುರಾಮ ನಾಯ್ಕೋಡಿ, ದಸಂಸ ಸಂಚಾಲಕ ಪ್ರಕಾಶ ಗುಡಿಮನಿ, ರಾಜು ಸಿಂದಗೇರಿ, ಯಮನಪ್ಪ ಬೂತಾಳಿ, ರಮೇಶ ಬನಸೋಡೆ, ಮಹೇಶ ಗುಡಿಮನಿ, ಶಿವು ಕವಲಗಿ, ರಾಘವೇಂದ್ರ ಪಡಗಾನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net