ಮೊಹರಂ ಭಾವೈಕ್ಯತಾ ಸಂಕೇತ

ಬಸವನಬಾಗೇವಾಡಿ ಬಸವೇಶ್ವರ ಯಾತ್ರಾ ನಿವಾಸದಲ್ಲಿ ಪಟ್ಟಣ ಸೇರಿ ಬಸವನಬಾಗೇವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಹಿಂದೂ-ಮುಸ್ಲಿಂ ಮುಖಂಡರೊಂದಿಗೆ ಮೊಹರಂ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ  ಮಾತನಾಡಿದರು. ಪಿ.ಐ.ಗುರುಶಾಂತ ದಾಶ್ಯಾಳ ಇದ್ದರು.
ಬಸವನಬಾಗೇವಾಡಿ ಬಸವೇಶ್ವರ ಯಾತ್ರಾ ನಿವಾಸದಲ್ಲಿ ಪಟ್ಟಣ ಸೇರಿ ಬಸವನಬಾಗೇವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಹಿಂದೂ-ಮುಸ್ಲಿಂ ಮುಖಂಡರೊಂದಿಗೆ ಮೊಹರಂ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ ಮಾತನಾಡಿದರು. ಪಿ.ಐ.ಗುರುಶಾಂತ ದಾಶ್ಯಾಳ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ ಹೇಳಿಕೆ
  • ಮೊಹರಂ ಹಬ್ಬದ ಶಾಂತಿ ಸಭೆ
ಬಸವನಬಾಗೇವಾಡಿ: ಹಿಂದೂ ಮುಸ್ಲಿಂರು ಸೇರಿ ಭಾವೈಕ್ಯತೆಯಿಂದ ಆಚರಿಸುವ ಹಬ್ಬವೇ ಮೊಹರಂ ಹಬ್ಬ ಎಂದು ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯ ಬಸವೇಶ್ವರ ಯಾತ್ರಾ ನಿವಾಸದಲ್ಲಿ ಪಟ್ಟಣ ಸೇರಿ ಬಸವನಬಾಗೇವಾಡಿ ಪೊಲೀಸ್ ಠಾಣೆಯ ವ್ಯಾಪ್ತಿ ಯಲ್ಲಿ ಬರುವ ಹಳ್ಳಿಗಳ ಹಿಂದೂ-ಮುಸ್ಲಿಂ ಧರ್ಮದ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಮೊಹರಂ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖಂಡರಾದ ಖಾಜಬಂರ ನದಾಫ್, ಮಸಾಕಸಾಬ ವಾಲಿಕಾರ, ಸಂಗಮೇಶ ಓಲೇಕಾರ, ಶಕೀಲ ಗುಡ್ನಾಳ ಮಾತನಾಡಿ ಜೂ.17 ಗುದ್ದಲಿ ಪೂಜೆ, 21ರಂದು ದೇವರ ಪ್ರತಿಷ್ಠಾನ, 25ರ ರಾತ್ರಿ ಮೆರವಣಿಗೆ 26ರಂದು ಹೊಳೆ ಹೋಗುತ್ತವೆ. ಕರ್ನಾಟಕದಲ್ಲಿ ಮೊಹರಂ ಕೇವಲ ಮುಸ್ಲಿಂರ ಹಬ್ಬವಾಗಿರದೆ ಭಾವೈಕ್ಯತೆ ಮತ್ತು ಸಹೋದರತೆಯ ಸಂಕೇತವಾಗಿದೆ. ಮೊಹರಂ ಹಿಂದೂಗಳು ಮುಸ್ಲಿಮರೊಂದಿಗೆ ಸೇರಿ ಪಂಜಾಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಾರೆ. ಹಲವು ಹಳ್ಳಿಗಳಲ್ಲಿ ಮುಸ್ಲಿಮರಿಗಿಂತ ಹಿಂದೂಗಳೇ ಹೆಚ್ಚು ಉತ್ಸಾಹದಿಂದ ಈ ಹಬ್ಬವನ್ನು ಆಚರಿಸುತ್ತಾರೆ ಎಂದರು.
ಪಿ.ಐ.ಗುರುಶಾಂತ ದಾಶ್ಯಾಳ ಮಾತನಾಡಿ, ಎಲ್ಲರೂ ಸೇರಿ ಮೊಹರಂನ್ನು ಆಚರಿಸುತ್ತಾರೆ. ಆದರೆ ಕೆಲವು ಹಳ್ಳಿಗಳಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಮನಸು ಗೊಂದಲವಾಗಿರುತ್ತದೆ ಆ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಪ್ರಚೋದನೆ ನೀಡಿ ಸಂಘರ್ಷಕ್ಕೆ ಕಾರಣವಾಗಬಾರದು. ಆ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಈ ಶಾಂತಿ ಸಭೆ ಮಾಡಲಾಗಿದೆ. ಅಂತ ಸಮಸ್ಯೆ ಇದ್ದಲ್ಲಿ ನಮಗೆ ತಿಳಿಸಿ ಎಂದು ಹೇಳಿದರು.
ವಿನೂತ ಕಲ್ಲೂರ , ಬಸವರಾಜ ಹಾರಿವಾಳ, ಸಂಗಮೇಶ ಕಾಳಹಸ್ತೇಶ್ವರಮಠ, ಸಿದ್ದರಾಮ ಪಾತ್ರೊಟಿ, ಬಸಣ್ಣ ದೇಸಾಯಿ, ರಾಜೇಸಾಬ ಚಳ್ಳಿಗಿಡದ, ಮಹೇಶ ಕೊಡಗಾನೂರ, ಅಬ್ದುಲ್ ರೈಮಾನ ಮುಂಜಾವರ, ನಬಿಸಾಹೇಬ ಮಕಾಂನದಾರ, ಪಾವಡಪ್ಪ ನಾಟೀಕಾರ, ಬಾಬುಲಾಲ್ ಚಪ್ಪರಬಂದ, ದಸ್ತಗಿರ ಮುಲಾ, ಹುಸೇನ್ ಮುಲಾ, ಮಹಮ್ಮದ್ ಮುಲಾ, ಮಂಜುನಾಥ ಕಟ್ಟಿಮನಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net