ಅರೋಗ್ಯ ಇಲಾಖೆ ಅಧೀನದಲ್ಲಿ ಈಗಾಗಲೇ 3,700ರಷ್ಟು 108 ಅಂಬುಲೆನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದರ ಜತೆ ಎಲ್ಲ ಮಾದರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಂದಾಜು 1,270 ಅಂಬುಲೆನ್‌ಗಳ ನಿಗಾವಹಿಸಲು, ತುರ್ತು ಪ್ರಕರಣಗಳನ್ನು ಸಾಗಿಸಲು ಹಾಗೂ ತಳಮಟ್ಟದ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಲು ಅನುಕೂಲ ಆಗುವಂತೆ ಎನ್ ಜಿ- ಇಆರ್ ಎಸ್ ಎಸ್ 112 ತಂತ್ರಾಂಶ ಅಳವಡಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.