ವಿಕಸಿತ ಭಾರತಕ್ಕಾಗಿ ಮೋದಿ ಸಂಕಲ್ಪ / DODABALLAPUR

ದೊಡ್ಡಬಳ್ಳಾಪುರದ ಭಗತ್​ಸಿಂಗ್​ ಕ್ರೀಡಾಂಗಣದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ವಿಜಯವಾಣಿಯ ತೂಬಗೆರೆ ಬಿಡಿ ಸುದ್ದಿ ವರದಿಗಾರ ಶಿವಕುಮಾರ್​ ಅವರನ್ನು ಸನ್ಮಾನಿಸಲಾಯಿತು. ಸಂಸದ ಡಾ.ಕೆ.ಸುಧಾಕರ್​, ಶಾಸಕ ಧೀರಜ್​ ಮುನಿರಾಜು, ಉಪವಿಭಾಗಾಧಿಕಾರಿ ಮಂಜುನಾಥ, ತಹಸೀಲ್ದಾರ್​ ಮಲ್ಲಪ್ಪ, ನಗರಸಭೆ ಅಧ್ಯಕ್ಷೆ ಪ್ರಭಾ ನಾಗರಾಜ್​, ಉಪಾಧ್ಯಕ್ಷ ಬಂತಿ ವೆಂಕಟೇಶ್​, ತಾಪಂ ಇಒ ಮಂಜುನಾಥ್​ ಹರ್ತಿ, ಬಿಇಒ ಶಂಕರಯ್ಯ ಇತರರು ಇದ್ದರು.
ದೊಡ್ಡಬಳ್ಳಾಪುರದ ಭಗತ್​ಸಿಂಗ್​ ಕ್ರೀಡಾಂಗಣದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ವಿಜಯವಾಣಿಯ ತೂಬಗೆರೆ ಬಿಡಿ ಸುದ್ದಿ ವರದಿಗಾರ ಶಿವಕುಮಾರ್​ ಅವರನ್ನು ಸನ್ಮಾನಿಸಲಾಯಿತು. ಸಂಸದ ಡಾ.ಕೆ.ಸುಧಾಕರ್​, ಶಾಸಕ ಧೀರಜ್​ ಮುನಿರಾಜು, ಉಪವಿಭಾಗಾಧಿಕಾರಿ ಮಂಜುನಾಥ, ತಹಸೀಲ್ದಾರ್​ ಮಲ್ಲಪ್ಪ, ನಗರಸಭೆ ಅಧ್ಯಕ್ಷೆ ಪ್ರಭಾ ನಾಗರಾಜ್​, ಉಪಾಧ್ಯಕ್ಷ ಬಂತಿ ವೆಂಕಟೇಶ್​, ತಾಪಂ ಇಒ ಮಂಜುನಾಥ್​ ಹರ್ತಿ, ಬಿಇಒ ಶಂಕರಯ್ಯ ಇತರರು ಇದ್ದರು.
Published on

ದೊಡ್ಡಬಳ್ಳಾಪುರ :

ಭಾರತೀಯರು ಸ್ವಾಭಿಮಾನಿಗಳು. ಭಾರತ ವಿಶ್ವದ ಸ್ವಾಭಿಮಾನಿ ದೇಶ. ಪ್ರಪಂಚದಲ್ಲಿಯೇ ದೊಡ್ಡ ಶಕ್ತಿಯಾಗಿ ನಮ್ಮ ದೇಶ ರೂಪುಗೊಳ್ಳುತ್ತಿದೆ ಎಂದು ಶಾಸಕ ಧೀರಜ್​ ಮುನಿರಾಜು ತಿಳಿಸಿದರು.

ನಗರದ ಭಗತ್​ ಸಿಂಗ್​ ಕ್ರೀಡಾಂಗಣದಲ್ಲಿ ಸ್ವಾತಂತ್ರ$್ಯ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಹೆಚ್ಚು ಕೌಶಲಯುತ ಯುವಕರು ದೇಶದಲ್ಲಿದ್ದು, ವಿಶ್ವವೇ ಭವ್ಯ ಭಾರತದತ್ತ ತಿರುಗಿ ನೋಡುವ ಹಾಗೆ ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತದ ಸಂಕಲ್ಪ ಹೊಂದಿದ್ದಾರೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ವಲಯಗಳಲ್ಲಿ ಬೆಳವಣಿಗೆ ಕಾಣಲು ಪ್ರಯತ್ನಿಸಲಾಗುತ್ತಿದೆ. ಅಭಿವೃದ್ಧಿ ಹೊಂದಿದ್ದ ದೇಶವಾಗಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಇದಕ್ಕೆ ರಾಜ್ಯವೂ ಹೆಗಲುಕೊಟ್ಟದೆ ಎಂದರು.

ದೊಡ್ಡಬಳ್ಳಾಪುರದಲ್ಲಿ ಐಟಿ&ಬಿಟಿ ಪಾರ್ಕ್​ :

ದೊಡ್ಡಬಳ್ಳಾಪುರದಲ್ಲಿ ಮೂರು ಲಕ್ಷ ಕಾರ್ಮಿಕರಿದ್ದು, ದೇಶ, ವಿದೇಶಗಳ ಜನರಿಗೆ ಇಲ್ಲಿ ಉದ್ಯೋಗ ಸಿಗುತ್ತಿದೆ. ಬೆಳವಂಗಲ ಹೋಬಳಿಗೆ ಕ್ವಿನ್​ ಸಿಟಿ, ಕೊನಘಟ್ಟ ಗ್ರಾಪಂ ಬಳಿ ಐಟಿ&ಬಿಟಿಪಾರ್ಕ್​ ನಿರ್ಮಿಸಲಾಗುತ್ತಿದೆ. ಸಾಪ್ಟ್​ವೇರ್​ ಕಂಪನಿಗಳು ತಾಲೂಕಿಗೆ ಬರುತ್ತಿವೆ. ಇಂಜಿನಿಯರ್​ ವಿದ್ಯಾರ್ಥಿಗಳು ಹೆಚ್ಚಿರುವುದರಿಂದ ಬೆಂಗಳೂರಿಗೆ ಕೆಲಸ ಅರಸಿ ಹೋಗುವ ಬದಲಾಗಿ ಇಲ್ಲಿಯೇ ಉದ್ಯೋಗ ಕಂಡುಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ನಶೆಮುಕ್ತ ಭಾರತ ನಿಮಾರ್ಣವಾಗಲಿ :

ವಿಕಸಿಕ ಭಾರತ ಕಲ್ಪನೆ ಸಾಕಾರಗೊಳ್ಳಲು ನಶೆಮುಕ್ತ ಭಾರತ ನಿರ್ಮಾಣಗೊಳ್ಳಬೇಕು. ದೇಶದ ಭವಿಷ್ಯಕ್ಕಾಗಿ ಡ್ರಗ್ಸ್​ ನಿರಾಕರಣೆ ಮಾಡಿ ನಶೆಮುಕ್ತ ಸಮಾಜ ನಿಮಾರ್ಣಕ್ಕೆ ಎಲ್ಲರೂ ಪ್ರಯತ್ನಿಸಬೇಕು ಎಂದು ಶಾಸಕರು ತಿಳಿಸಿದರು.

ಆರೋಗ್ಯ ಉಚಿತ ತಪಾಸಣೆ :

ಭಗತ್​ ಸಿಂಗ್​ ಕ್ರೀಡಾಂಗಣದಲ್ಲಿ ಹೀಲಿನ್​ ಆಸ್ಪತ್ರೆಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಬಿಪಿ, ಸಕ್ಕರೆ ಕಾಯಿಲೆ ಸೇರಿ ವಿವಿಧ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಬಗ್ಗೆ ಹೀಲಿನ್​ ಆಸ್ಪತ್ರೆ ಮಾಲೀಕ ಡಾ.ವೆಂಕಟೇಶ್​ ಪ್ರಸಾದ್​ ಮಾತನಾಡಿ, ಸಾರ್ವಜನಿಕರಿಗೆ ನಿರಂತರವಾಗಿ ಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕ್ರೀಡಾಂಗಣದಲ್ಲಿ ಪ್ರತಿ ಸೋಮವಾರ ಸಂಜೆ 5ರಿಂದ 6.30ರವರೆಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಆಡಳಿತ, ತಾಪಂ, ಎಲ್ಲ ಇಲಾಖೆ ಅಧಿಕಾರಿಗಳು ರೈತರು, ಬಡವರ ಪರ ಕೆಲಸ ಮಾಡಬೇಕು. ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು.

— > ಧೀರಜ್​ ಮುನಿರಾಜು, ಶಾಸಕ, ದೊಡ್ಡಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net