ಶಾಸಕರಿಗೆ ಮತ್ತು ಶಾಸಕರ ಕುಟುಂಬಕ್ಕೂ ಐಪಿಎಲ್ ಟಿಕೆಟ್ ಬೇಕು ಎಂಬ ಕಾಶಪ್ಪನವರ್ ಹೇಳಿಕೆಗೆ ಕಿಡಿಕಾರಿರುವ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಶಾಸಕರು ವಿಧಾನಸೌಧದಲ್ಲಿ ಐಪಿಎಲ್ ಅಭಿಮಾನಿಗಳ ಸುರಕ್ಷತೆ ಮತ್ತು ಭದ್ರತೆಯ ಕುರಿತು ಚರ್ಚಿಸಲು ಸಮಯ ಕಳೆದಿದ್ದರೆ, ಖಂಡಿತ ಅದು ಸದನದ ಘನತೆಯನ್ನು ಎತ್ತಿಹಿಡಿಯುತ್ತಿತ್ತು. ಆದರೆ, ಅದರ ಬದಲಿಗೆ ತಮಗೂ ಮತ್ತು ತಮ್ಮ ಕುಟುಂಬಗಳಿಗೆ ಉಚಿತ ಟಿಕೆಟ್‌ಗಳನ್ನು ಕೊಡುವಂತೆ ಬೇಡಿಕೊಳ್ಳುತ್ತಿರುವುದು ಮತ್ತು ಬೆದರಿಕೆ ಹಾಕುವುದನ್ನು ನಾವು ನೋಡುವಂತಾಯಿತು ಎಂದರು.