ಕೆಜಿಎ್: ದ್ವೀತಿಯ ಪಿಯು ಫಲಿತಾಂಶದಲ್ಲಿ ಕೆಜಿಎಫ್ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ felicitates ವಿದ್ಯಾರ್ಥಿಗಳನ್ನು ಶಾಸಕಿ ರೂಪಕಲಾ ಅವರು ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಸನ್ಮಾನಿಸಿದರು.
ಬೇತಮಂಗಲದ ಸಾಯಿ ಪಿಯು ಕಾಲೇಜಿನ ಪಿ.ಮಧನ್ (596), ಸಿ.ಪ್ರಿಯಾಣಿ (592)
ಕೆಜಿಎಫ್ ನಗರದ ಸರ್ಕಾರಿ ಬಾಲಕಿಯರ ಕಾಲೇಜಿನ ಸಿ. ರೇಣುಶ್ರೀ (579), ಚೈತ್ರ (595) ಅವರನ್ನು ಸನ್ಮಾನಿಸಲಾಯಿತು.
ಶಾಸಕಿ ರೂಪಕಲಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನೆಯ ಪರಿಸ್ಥಿತಿ ಹೇಗೆ ಇರುತ್ತದೆ ಎಂಬುದರ ಬಗ್ಗೆ ಚಿಂತೆ ಮಾಡದೆ ತಮ್ಮ ಭವಿಷ್ಯ ಒಳ್ಳೆ ರೀತಿಯಲ್ಲಿ ರೂಪಿಸಿಕೊಳ್ಳಲು ಶ್ರಮ ಪಡುವುದು ಪ್ರಶಂಸನೀಯ ಎಂದು ಹೇಳಿದರು.
ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿರುವ ಮದನ್ಗೆ ತಂದೆ ಇಲ್ಲದೆ ತಾಯಿ ಹಾಗೂ ತಾತನ ಪೋಷಣೆಯಲ್ಲಿ ಬೆಳೆದಿದ್ದು, ಆ ಹುಡುಗನ ಮುಂದಿನ ವಿದ್ಯಾಭ್ಯಾಸದ ಜವಾಬ್ದಾರಿ ತಾವು ಹೊರುವುದಾಗಿ ತಿಳಿಸಿದರು.