ಆರಂಭದಲ್ಲೇ ಭಾಷಣ ಮೊಟಕುಗೊಳಿಸಿದ ಶಾಸಕ

  ಮದ್ದೂರು ನಗರದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ವಿನುತಾಉದಯ್, ಧನಂಜಯ, ಕೆ.ಎಂ.ರವಿ, ಸಿಪಾಯಿ ಶ್ರೀನಿವಾಸ್, ಹರೀಶ್‌ಬಾಬು, ಪಿ.ಸಂದರ್ಶ ಇದ್ದರು.
ಮದ್ದೂರು ನಗರದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ವಿನುತಾಉದಯ್, ಧನಂಜಯ, ಕೆ.ಎಂ.ರವಿ, ಸಿಪಾಯಿ ಶ್ರೀನಿವಾಸ್, ಹರೀಶ್‌ಬಾಬು, ಪಿ.ಸಂದರ್ಶ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪ
  • ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್
ಮದ್ದೂರು: ನಗರದ ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಉದಯ್ ಆರಂಭದಲ್ಲೇ ಬೇಸರಗೊಂಡು ತಮ್ಮ ಭಾಷಣವನ್ನು ಮೊಟಕುಗೊಳಿಸಿದರು.
ತಾಲೂಕಿನ ವಿವಿಧ ಭಾಗಗಳ ಶಾಲೆಗಳಿಂದ ಆಗಮಿಸಿದ್ದ ಶಾಲಾ ಶಿಕ್ಷಕರು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದವರ ಮಾತು ಆಲಿಸದೆ ಅಲ್ಲಲ್ಲಿ ಕೆಲವು ಶಿಕ್ಷಕರೇ ಮಾತನಾಡುತ್ತಿದ್ದರು. ಅಷ್ಟೇ ಅಲ್ಲದೆ ಕೆಲ ಶಿಕ್ಷಕರು ತಮ್ಮ ಮೊಬೈಲ್‌ಗಳಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್ ನೋಡುತ್ತಿರುವುದನ್ನು ಶಾಸಕರು ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಗಮನಿಸುತ್ತಿದ್ದರು.
ಶಾಸಕರು ಸೇರಿದಂತೆ ಹಲವರು ಭಾಷಣ ಮಾಡುವುದಕ್ಕೂ ಮೊದಲೇ ಹಲವು ಶಿಕ್ಷಕರು ಊಟ ಮಾಡಲು ಕಾಲ್ಕಿತ್ತರು. ಇದನ್ನು ಗಮನಿಸಿದ ಟ್ರಸ್ಟ್‌ನ ಕೆಲವು ಸದಸ್ಯರು ಧ್ವನಿವರ್ಧಕದ ಮೂಲಕ ಕಾರ್ಯಕ್ರಮ ಈಗಷ್ಟೆ ಶುರುವಾಗಿದೆ. ಅಲ್ಲದೆ ಶಾಸಕರು ಸೇರಿದಂತೆ ಇನ್ನೂ ಹಲವರು ಮಾತನಾಡುವವರು ಇದ್ದಾರೆ. ಊಟಕ್ಕೆ ಹೋಗಬಾರದು ಎಂದು ಹೇಳುತ್ತಿದ್ದರೂ ಶಿಕ್ಷಕರು ಯಾವುದಕ್ಕೂ ಕಿವಿಗೊಡಲಿಲ್ಲ.
ಈ ವೇಳೆ ಶಾಸಕ ಕೆ.ಎಂ.ಉದಯ್ ಮಾತನಾಡಿ, ನಿಮ್ಮ ವರ್ತನೆಗಳ ಬಗ್ಗೆ ನಾನು ಈ ದಿನ ಮಾತನಾಡುವುದಿಲ್ಲ. ಏಕೆಂದರೆ ಇಂದು ಶಿಕ್ಷಕರ ದಿನಾಚರಣೆ. ಶುಭಾಶಯಗಳನ್ನಷ್ಟೇ ಹೇಳುತ್ತೇನೆ ಎಂದಷ್ಟೆ ಹೇಳಿ ತಮ್ಮ ಭಾಷಣವನ್ನು ಮೊಟಕುಗೊಳಿಸುವ ಮೂಲಕ ಅಸಮಾಧಾನ ಹೊರ ಹಾಕಿದರು.
ತಾಲೂಕು ವ್ಯಾಪ್ತಿಯ ಹಲವು ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಲವಾರು ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಬಿಇಒ ಧನಂಜಯ, ಸಮಾಜ ಸೇವಕರಾದ ವಿನುತಾ ಉದಯ್, ಕೆ.ಎಂ.ರವಿ, ನಿವೃತ್ತ ಸೈನಿಕ ಸಿಪಾಯಿ ಶ್ರೀನಿವಾಸ್, ಮನ್‌ಮುಲ್ ಅಧ್ಯಕ್ಷ ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರಾಜೇಶ್ವರಿ, ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಚ್.ಆರ್.ಅನಂತೇಗೌಡ, ಅಂಕೇಗೌಡ, ರವೀಶ್, ಸತೀಶ್ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net