ಕಾಮಗಾರಿ ಹೆಸರಿನಲ್ಲಿ ಹಣ ದುರ್ಬಳಕೆ: ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು-Complaint

ಸಹಕಾರ ಸಂಘಗಳ ಉಪನಿಬಂಧಕರಿಕೆ ದೂರು ಸಲ್ಲಿಕೆ
ಸಹಕಾರ ಸಂಘಗಳ ಉಪನಿಬಂಧಕರಿಕೆ ದೂರು ಸಲ್ಲಿಕೆ
Published on
ಬೆಂಗಳೂರು: ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್​​ ಕರ್ನಾಟಕ ಸಂಸ್ಥೆಯು ವಿವಿಧ ಕಾಲೇಜುಗಳ ಆವರಣದಲ್ಲಿ ನಡೆಸಿರುವ ಕಾಮಗಾರಿಗಳ ಹೆಸರಿನಲ್ಲಿ ಕೋಟ್ಯಂತರ ರೂ. ದುರುಪಯೋಗದ ಕುರಿತು ಸಹಕಾರ ಸಂಘಗಳ ಉಪನಿಬಂಧಕರ ಹಾಗೂ ಸಂಘಗಳ ನೋಂದಣಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ.
ಸಂಸ್ಥೆಯ ಗೌರ್ನಿಂಗ್ ಕೌನ್ಸಿಲ್ ಸದಸ್ಯರಾದ ನಾಗರಾಜು ಮತ್ತು ಕೆ. ನರಸಿಂಹಪ್ಪ ಎಂಬುವರು ಈ ಬಗ್ಗೆ ದೂರು ಕೊಟ್ಟಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಬಸವನಗುಡಿ, ಜಯನಗರ ಕಾಲೇಜುಗಳ ಆವರಣದಲ್ಲಿ ಕಾಮಗಾರಿಗಳ ಸಂಬಂಧ ಗುತ್ತಿಗೆದಾರರಿಗೆ ಸಂಸ್ಥೆಯಿಂದ ಅಧಿಕ ಹಣ ವರ್ಗಾಯಿಸಿ, ನಂತರ ಆ ಅಧಿಕ ಹಣವನ್ನು ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ವಾಪಸ್ ಪಡೆದು ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಡಿವಿಜಿ ರಸ್ತೆಯ ಹೆಣ್ಣುಮಕ್ಕಳ ವಿದ್ಯಾರ್ಥಿನಿಲಯದ ಕಾಮಗಾರಿ ವ್ಯವಹಾರದಲ್ಲಿ ಗುತ್ತಿಗೆದಾರರಿಗೆ ಹೆಚ್ಚಿನ ಹಣ ವರ್ಗಾಯಿಸಿ, ಅವರಿಂದ ನಗದು ರೂಪದಲ್ಲಿ ಕಮಿಷನ್ ಪಡೆಯಲಾಗಿದೆ. ಕಾಲೇಜುಗಳಿಗೆ ಕಂಪ್ಯೂಟರ್ ಖರೀದಿ ನೆಪದಲ್ಲಿ ಲಕ್ಷಾಂತರ ರೂ. ದುರುಪಯೋಗ ಮಾಡಲಾಗಿದೆ. ಒಟ್ಟು 12 ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಹಕಾರ ಸಂಘಗಳ ಉಪನಿಬಂಧಕರಿಗೆ ಕೊಟ್ಟಿರುವ ದೂರಿನಲ್ಲಿ ಗೌರ್ನಿಂಗ್ ಕೌನ್ಸಿಲ್ ಸದಸ್ಯರು ಉಲ್ಲೇಖಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net