ಸಾರ್ವಜನಿಕರ ಸಮಸ್ಯೆ ಆಲಿಸಿದ ಸಚಿವ ಸತೀಶ್ ಜಾರಕಿಹೊಳಿ
ವಿಜಯವಾಣಿ ಸುದ್ದಿಜಾಲ ದಡ್ಡಿ : ಸಮೀಪದ ಅಲದಾಳ ಗೆಸ್ಟ್ಹೌಸ್‌ನಲ್ಲಿ ಸಚಿವ ಸತೀಶ ಜಾರಕಿಹೊಳಿ ಭಾನುವಾರ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದರು.
ದಡ್ಡಿ ಗ್ರಾಮದ ಮುಸ್ಲಿಂ ಗಲ್ಲಿಯ ಪ್ರತಿ ವರ್ಷ ಮಳೆಗಾಲದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಜನರು ವಾಸಿಸಲು ಯೋಗ್ಯವಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುವುದರ ಕುರಿತು ಸಚಿವರ ಗಮನಕ್ಕೆ ತರಲಾಯಿತು. ಸಮಸ್ಯೆಯ ತೀವ್ರತೆ ಅರಿತು, ಈ ಕುರಿತು ತಹಶೀಲ್ದಾರ್ ಅವರು ಚರ್ಚಿಸಿದ್ದಾರೆ.
ದಯಾನಂದ ಪಾಟೀಲ, ಸಂಜು ಮಡಲಗಿ, ವಿಲಾಸ ನಾರ್ವೆಕರ್, ದತ್ತಾ ಪಾಟೀಲ ಇತರರು ಇದ್ದರು.